ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಲೆಟರ್ ಹೆಡ್ ಬಳಸಿ ಕೋಟ್ಯಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ಈ ಘಟನೆ ಬಗ್ಗೆ ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಂಚನೆಯಲ್ಲಿ ಸಿಲುಕಿ ಮೋಸ ಹೋದವರು ಅಡ್ವೋಕೇಟ್ ಗಳು, ಐಟಿ-ಬಿಟಿ ಮಂದಿ ಆಗಿದ್ದಾರೆ.
ರೆಸ್ಟೋರೆಂಟ್ ವೊಂದರ ಮಾಲೀಕ ಮುಡಾ ಲೆಟರ್ ಹೆಡ್ ಬಳಸಿ ವಂಚನೆ ಮಾಡಿದ್ದಾನೆ ಎಂದರು.
ಕಳೆದ 25 ದಿನದ ಹಿಂದೆಯಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
ನಗರದ ಸರಸ್ವತಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದು, ಆತನನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆಂದು ತಿಳಿಸಿದರು.
ಈ ರೀತಿಯ ವಂಚನೆ ಜಾಲದಲ್ಲಿ ಮತ್ತಷ್ಟು ಮಂದಿ ಮೋಸ ಹೋಗಿದ್ದಾರೆಂದು ಹೇಳಿದರು.
ಮುಂದೆ ಯಾರೂ ಮುಡಾ ಹೆಸರಲ್ಲಿ ವಂಚನೆಗೊಳಗಾಗಬೇಡಿ ಎಂದು ರಾಜೀವ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುಡಾ ಹೆಸರಲ್ಲಿ ಯಾರೇ ಬಂದು ನಿವೇಶನ ಮನೆ ಕೊಡಿಸುತ್ತೇವೆ ಎಂದು ಹೇಳಿದರೆ ಈ ಬಗ್ಗೆ ಮುಡಾಕ್ಕೆ ಮಾಹಿತಿ ನೀಡಿ ಎಂದವರು ಮನವಿ ಮಾಡಿದ್ದಾರೆ.
ನಿವೇಶನ ಕೊಡಿಸಲು ಹಣ ಸಂಗ್ರಹಿಸಲು ಮುಡಾದಿಂದ ಯಾರನ್ನೂ ನೇಮಿಸಿಲ್ಲ. ಮುಡಾ ನಿವೇಶನ ಕೊಡಿಸುವುದಾಗಿ ಹೇಳಿದರೆ ಆ ಬಗ್ಗೆ ಪೂರ್ಣ ದಾಖಲಾತಿ ತಂದು ಮುಡಾ ಕಛೇರಿಯಲ್ಲಿ ಪರಿಶೀಲಿಸಿ ಖಚಿತ ಪಡಿಸಿಕೊಂಡು ನಿವೇಶನ ಖರಿದೀಸಿ ಎಂದು ರಾಜೀವ್ ಅವರು ತಿಳಿಸಿದ್ದಾರೆ.
ಮುಡಾ ಲೆಟರ್ ಹೆಡ್ ಬಳಸಿ ಕೋಟ್ಯಾಂತರ ರೂ. ವಂಚನೆ; ಮೋಸ ಹೋದವರು ಅಡ್ವೋಕೇಟ್ ಗಳು, ಐಟಿ-ಬಿಟಿ ಮಂದಿ

