ನವದೆಹಲಿ: ದೇಶಾದ್ಯಂತ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾತನಾಡಿದರು.
ಇಂದಿನಿಂದ ದೇಶಾದ್ಯಂತ ಕೋವಿಡ್ ಡ್ರೈ ರನ್ ಆರಂಭವಾಗಿದೆ ಎಂದ ಅವರು ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಡಾ.ಹರ್ಷವರ್ಧನ್ ತಿಳಿಸಿದರು.
ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕೋವಿಡ್ -19 ವ್ಯಾಕ್ಸಿನ್ ಇಡೀ ದೇಶಾದ್ಯಂತ ಉಚಿತವಾಗಿ ಲಭ್ಯವಿದೆ. ಜನರು ಯಾವುದೇ ಹಣ ನೀಡಬೇಕಿಲ್ಲ ಎಂದು ಅವರು ತಿಳಿಸಿದರು.
ದೇಶಾದ್ಯಂತ ಕೊರೊನಾ ಡ್ರೈ ರನ್ ಆರಂಭವಾಗುತ್ತಿರುವ ಸಂದರ್ಭದಲ್ಲಿ ಲಸಿಕೆ ಕುರಿತಾಗಿ ಹಲವು ಊಹಾಪೆÇೀಹಗಳು ಹರಿದಾಡುತ್ತಿವೆ. ಆದರೆ ಸಾರ್ವಜನಿಕರು ಯಾವ ವದಂತಿಗಳಿಗೂ ಕಿವಿಗೊಡಬೇಡಿ ಎಂದರು.
ಸಚಿವರು ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಡ್ರೈ ರನ್ ಪರಿಶೀಲನೆ ನಡೆಸಿದರು.
ದೇಶಾದ್ಯಂತ ಕೊರೊನಾ ಲಸಿಕೆ ಉಚಿತ -ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

