ನವದೆಹಲಿ: ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕ ತಜ್ಞರ ಸಮಿತಿ ಅನುಮತಿ ನೀಡಿದೆ.
ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‍ಫರ್ಡ್ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕದ ತಜ್ಞರ ಸಮಿತಿ ಅನುಮತಿಸಿದೆ.
ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಷರತ್ತುಬದ್ಧ ತುರ್ತು ಬಳಕೆಗೆ ಪರಿಣತರ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.
ಲಸಿಕೆಯ ತುರ್ತು ಅನುಮೋದನೆಗೆ ಸಂಬಂಧಿಸಿದಂತೆ ಅರ್ಜಿ ಪರಿಶೀಲಿಸಿದ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿ, ಲಸಿಕೆ ತಯಾರಕ ಕಂಪನಿಗಳಿಂದ ವೈದ್ಯಕೀಯ ಪ್ರಯೋಗಗಳ ಕುರಿತು ಮಾಹಿತಿ ಪಡೆದು ಲಸಿಕೆ ಬಳಕೆಗೆ ಅನುಮತಿ ನೀಡಿದೆ.
ಭಾರತದಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಹಾಗೂ ಲಸಿಕೆ ತಯಾರಿಸಲು ಸೆರಮ್ ಇನ್ ಸ್ಟಿಟ್ಯೂಟ್ ಬ್ರಿಟನ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಲಸಿಕೆ ತಯಾರಕರಾದ ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ತಯಾರಿಸಲು ಆಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ.

