ಸಮಯದೊಂದಿಗೆ ಸಾಗಿದಾಗಲೇ ಸಿದ್ಧಿ; ಸಮಯದ ಸೂಕ್ತ ಬಳಕೆ ಯಶಸ್ಸಿಗೆ ಮುನ್ನುಡಿ

ಜಗತ್ತು ಅತಿ ವೇಗವಾಗಿ ಬದಲಾಗುತ್ತಿದೆ. ಸಾಧಿಸುವ ಮನಸ್ಸಿರುವವರೆಲ್ಲ ನಮ್ಮ ಸುತ್ತಲ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರಬೇಕು. ಇಲ್ಲದಿದ್ದರೆ ನೀವು ಹಿಂದೆ ಉಳಿದು ಬಿಡಬಹುದು.
ಹೌದು ಇಂತಹ ವ್ಯಾಖ್ಯಾನಗಳನ್ನು ಎಲ್ಲಾ ಕಾಲ ಘಟ್ಟದಲ್ಲೂ ಕೇಳುತ್ತಿರುತ್ತೇವೆ. ಕಾರಣ ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹಳ ಬೇಗ ಎಲ್ಲವೂ ಮಹತ್ವ ಕಳೆದುಕೊಳ್ಳುತ್ತಿದೆ. ಯಾವುದೇ ಕಂಪನಿಯ ಒಂದು ಸ್ಮಾರ್ಟ್ ಫೋನ್ ಎರಡೇ ತಿಂಗಳಲ್ಲಿ ಮತ್ತೊಂದು ಹೊಸ ವಿಷೇಶತೆ ಮತ್ತು ಹೆಚ್ಚು ಸಾಮಥ್ರ್ಯದೊಂದಿಗೆ ಮಾರುಕಟ್ಟೆಗೆ ದಾಳಿಯಿಡುತ್ತದೆ.
ಅದಕ್ಕೆ ಪ್ರತಿಸ್ಪರ್ಧಿಯಾಗಿ ಮತ್ತಾವುದೋ ಕಂಪನಿಯ ಮೊಬೈಲ್ ಇನ್ನಷ್ಟು ವೈಶಿಷ್ಟ್ಯತೆಗಳೊಂದಿಗೆ ಬಂದು ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತದೆ.
ಇದು ಕೇವಲ ಮೊಬೈಲ್‍ನ ಕಥೆಯಲ್ಲ ಬದಲಿಗೆ ಎಲ್ಲಾ ಕ್ಷೇತ್ರ, ಉದ್ಯಮಗಳ ಕಥೆಯೂ ಆಗಿದೆ. ಕಾರಣ ಅಂದು ಮಕ್ಕಳಿಗೆ ಟಿವಿ ನೋಡುವುದು ಇನ್ನು ಮೊಬೈಲ್ ಬಳಕೆಯನ್ನು ತಪ್ಪೆಂದೆ ಹೇಳುತ್ತಿದ್ದ ನಾವು ಈಗ ಅವರ ವಿದ್ಯಾಬ್ಯಾಸಕ್ಕಾಗಿ ಅದನ್ನೆ ತೆಗೆಸಿಕೊಡುವ ಹಂತಕ್ಕೆ ಬಂದಿದ್ದೇವೆ.
ಅಂದರೆ ಕಾಲ ಘಟ್ಟದಲ್ಲಿ ಎಲ್ಲವೂ ಬೇರೆಯೆ ದೃಷ್ಟಿಕೋನದಿಂದ ನೋಡುವಂತಾಗುತ್ತಿರುವುದು ಮಾತ್ರ ಸುಳ್ಳಲ್ಲ. ಇಂತಹ ವೈರುಧ್ಯಗಳಿಗೆ ಒಂದಷ್ಟು ಉದಾಹರಣೆಯನ್ನು ನೋಡಬಹುದು.
ಸುಮಾರು 1998ರಲ್ಲಿ ಕೊಡಾಕ್‍ನಲ್ಲಿ ಕೆಲಸ ಮಾಡುತ್ತಿದ್ದ 1,70,000 ಉದ್ಯೋಗಿಗಳು ವಿಶ್ವದ ಶೇ.85ರಷ್ಟು ಫೆÇೀಟೊ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ನಂತರದ ಕೆಲವೇ ವ?ರ್Àಗಳಲ್ಲಿ, ಡಿಜಿಟಲ್ ಫೆÇೀಟೊಗ್ರಫಿ ಅವರನ್ನು ಮಾರುಕಟ್ಟೆಯಿಂದಲೇ ಹೊರಹಾಕಿತು. ಕೊಡಾಕ್ ದಿವಾಳಿಯಾಯಿತು. ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು. ಅದೇ ರೀತಿ ಊಒಖಿ(ವಾಚ್), ಮರ್ಫಿ(ರೇಡಿಯೋ), ಅಂಬಾಸಿಡರ್ (ಕಾರು), ಡಯನೋರಾ (ಟಿವಿ) ನೋಕಿಯಾ (ಮೊಬೈಲ್), ರಾಜ್‍ದೂತ್ (ಬೈಕ್), ದಿನೇಶ್ (ಬಟ್ಟೆ) ನಂತಹ ಕಂಪನಿಗಳು ಎಷ್ಟೆಲ್ಲಾ ಹೆಸರು ಮಾಡಿದ್ದರೂ ಮುಂದೆ ಬಂದ ಅತ್ಯಾಧುನಿಕ ಕಂಪನಿಗಳ ಹೊಸ ತಂತ್ರಜ್ಞಾನದ ಮುಂದೆ ಮಂಡಿಯೂರ ಬೇಕಾಯಿತು. ಕಾಲದ ಜತೆಗೆ ನಡೆಯ ಬೇಕಾದವರು ಇಂತಹದನ್ನು ಅರಿತು ಬದಲಾವಣೆಗೆ ತೆರೆದು ಕೊಂಡಿರಬೇಕು ಎಂಬುದಂತೂ ಸತ್ಯ.
ಈ ಎಲ್ಲ ಕಂಪನಿಗಳ ಉತ್ಪಾದನೆಗಳಲ್ಲಿ ಗುಣಮಟ್ಟದ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಂದವು ಅದಕ್ಕೆ ಕಾರಣ ಕಾಲಕ್ಕೆ ತಕ್ಕಂತೆ ಬದಲಾಗದಿರುವುದು. ಆದರೆ, ಊಬರ್ ಕೇವಲ ಸಾಫ್ಟ್‍ವೇರ್ ಆಧಾರಿತ ಒಂದು ಉದ್ಯಮವಾಗಿದ್ದು, ತನ್ನದೇ ಆದ ಕಾರು ಹೊಂದಿಲ್ಲದಿದ್ದರೂ, ಅದು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿಯಾಗಿದೆ. Pಚಿಥಿಣm, oಟಚಿ ಛಿಚಿbs, oಥಿo ಕೊಠಡಿಗಳಂತಹ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ.
ಆಧುನಿಕ ತಂತ್ರಜ್ಞಾನ ಯಾವ ಮಟ್ಟದಲ್ಲಿ ಬೆಳಯುತ್ತಿದೆ ಎಂದರೆ ವಕೀಲರು ಸಹ ಯುಎಸ್‍ನಲ್ಲಿ ಕೆಲಸ ಕಳೆದು ಕೊಳ್ಳುವ ಭೀತಿ ಎದುರಿಸುವಂತಾಗಿದೆ. ಏಕೆಂದರೆ ಐಬಿಎಂ ವ್ಯಾಟ್ಸನ್ ಎಂಬ ಸಾಫ್ಟ್‍ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆ ನೀಡುತ್ತದೆ. ಇಂತಹ ಸಾಫ್ಟ್‍ವೇರ್‍ನಿಂದಾಗಿ ಮುಂದಿನ 10 ವರ್ಷಗಳಲ್ಲಿ, ಅಲ್ಲಿನ ಶೇ. 90ರಷ್ಟು ವಕೀಲರು ನಿರುದ್ಯೋಗಿಗಳಾದರೂ ಅಚ್ಚರಿಯಿಲ್ಲ.
ಒಂದು ಸಾಫ್ಟ್‍ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗ ನಿರ್ಣಯ ಮಾಡುತ್ತದೆ. ಅಂದರೆ ಇಲ್ಲಿ ಮಾನವ ನಿರ್ಮಿಸಿರುವ ಸಾಫ್ಟ್‍ವೇರ್‍ಗಳೇ ಹೆಚ್ಚು ಬುದ್ಧಿವಂತವಾಗಿರುವುದರಿಂದ ಇನ್ನೆಂತಹ ಮಟ್ಟದಲ್ಲಿ ಅದು ಬೆಳವಣಿಗೆ ಕಾಣುತ್ತಿವೆ ಎಂಬುದನ್ನು ಊಹಿಸಬಹುದು.
ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ತಂತ್ರಜ್ಞಾನಗಳು ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆ ಅನಿವಾರ್ಯವಾಗ ಬಹುದು. ಈಗ ಎದುರಿಸುತ್ತಿರುವ ಇಂಧನ ಕೊರತೆ ಮತ್ತಷ್ಟು ಹೆಚ್ಚಿ ಪೆಟ್ರೋಲ್ ಬಳಕೆ ಶೇ.90ರಷ್ಟು ಕಡಿಮೆಯಾದರೆ. ಎಲೆಕ್ಟ್ರಿಕ್ ವಾಹನಗಳೇ ನಮ್ಮ ಅವಶ್ಯಕತೆಗಳಾಗುತ್ತವೆ.
ನೀವು ಉಬರ್‍ನಂತಹ ಸಾಫ್ಟ್‍ವೇರ್‍ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕ ರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ… ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‍ಗಿಂತ ಅಗ್ಗವಾಗಿರುತ್ತದೆ.
ಕಾರುಗಳು ಚಾಲಕ ರಹಿತವಾದರೆ ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ ಶೇ. 90ರಷ್ಟು ಕಾರುಗಳು ಕಣ್ಮರೆಯಾಗಿ, ಟ್ರಾಫಿಕ್ ಮತ್ತು ಪಾಕಿರ್ಂಗ್ ನಂತಹ ಸಮಸ್ಯೆಗಳು ಸ್ವಯಂ ಚಾಲಿತವಾಗಿ ಕಣ್ಮರೆಯಾಗುವಂತಹ ಸಂದರ್ಭ ತಳ್ಳಿಹಾಕುವಂತಿಲ್ಲ. ಅಪಘಾತಗಳು ಸಾಕಷ್ಟು ಕಡಿಮೆಯಾಗುವಂತಹ ವಿಧಾನವೂ ಇದರ ಭಾಗವಾಗಬಹುದು.
ಸುಮಾರು 10-12 ವರ್ಷಗಳ ಹಿಂದೆ, ಎಲ್ಲೆಡೆ ಪಿಸಿಒ ಇರುತ್ತಿತ್ತು. ಎಲ್ಲರ ಕೈಗೂ ಮೊಬೈಲ್ ಫೆÇೀನ್ ಬಂದಾಗ ಪಿಸಿಒ ಸ್ಥಳದಲ್ಲಿ ಫೆÇೀನ್ ರೀಚಾರ್ಜ್ ಮಾಡುವ ಅಂಗಡಿ ತಲೆ ಎತ್ತಿತ್ತು. ಈಗ ರೀಚಾರ್ಜ್ ಅಂಗಡಿಗಳಿಗೂ ಕೆಲಸವಿಲ್ಲ. ನಮ್ಮ ಆನ್‍ಲೈನ್‍ನಲ್ಲೆ ರೀಚಾರ್ಜ್ ಮಾಡಿಕೊಳ್ಳುವುದರಿಂದ ಈ ಅಂಗಡಿಗಳ ವ್ಯಾಪಾರಕ್ಕೂ ಕುತ್ತು ಬಂದಿದೆ. ಎಲ್ಲಾ ಕಡೆ ಮೊಬೈಲ್ ಫೆÇೀನ್ ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ ಅಂಗಡಿಗಳು ಕಾಣಸಿಗುತ್ತವೆ.
ಈಗ ತಮ್ಮ ಸ್ಮಾರ್ಟ್‍ಫೆÇೀನ್‍ಗಳಿಂದಲೇ ರೈಲ್ವೆ ಟಿಕೆಟ್‍ಗಳನ್ನು ಕಾಯ್ದಿರಿಸುತ್ತೇವೆ… ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ…. ಕರೆನ್ಸಿ ನೋಟ್‍ನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು. ಈಗ ಅದು ಮತ್ತಷ್ಟು ಸ್ಮಾರ್ಟ್ ಆಗುತ್ತಾ ಡಿಜಿಟಲ್ ಆಗಿ ಮಾರ್ಪಟ್ಟಿದೆ. ಈ ಡಿಜಿಟಲ್ ಯುಗ ಮುಂದೆ ಇನ್ನಷ್ಟು ಬದಲಾವಣೆಗಳಿಗೆ ನಾಂದಿ ಹಾಡಿದರೆ ಅದರ ವೇಗಕ್ಕೂ ನಾವು ಹೊಂದಿಕೊಳ್ಳಬೇಕು. ಹಾಗಾಗಿ ಒಬ್ಬ ವ್ಯಕ್ತಿ ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
ನಾವು ಯಾವಾಗಲು ಸಮಯದೊಂದಿಗೆ ಸಾಗುತ್ತಾ ಯಶಸ್ಸನ್ನು ಸಾಧಿಸಬೇಕು? ಎಂಬುದಂತು ಸತ್ಯ.