ಪುಲ್ವಾಮ ದಾಳಿ ನೆನಪು

ನಮ್ಮ 40 ವೀರ ಯೋಧರ ಬಲಿದಾನಕ್ಕೆ ಭಾರತೀಯ ಸೇನೆ
ಹೇಗೆ ಪ್ರತೀಕಾರ ತೀರಿಸಿಕೊಂಡಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಡಾ. ಗುರುಪ್ರಸಾದ ಎಚ್ .ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

ಫೆಬ್ರುವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ. ಆದರೆ ಭಾರತೀಯರು ಈ ದಿನವನ್ನು ಬ್ಲ್ಯಾಕ್ ಡೇಯನ್ನಾಗಿ ಆಚರಿಸುತ್ತಾರೆ.
ನಮ್ಮ ದೇಶದ ಕೇಂದ್ರ ಮೀಸಲು ಪೆÇಲೀಸ್ ಪಡೆಯ ಮೇಲೆ ಭೀಕರ ದಾಳಿ ನಡೆಸಿದ ಪರಿಣಾಮ ನಮ್ಮ ದೇಶದ 40 ಯೋಧರು ದುರಂತ ಸಾವಿಗೆ ಶರಣಾದ ದಿನವಿಂದು.
ಇದೇ ಪುಲ್ವಾಮಾ ದಾಳಿ ಅಥವಾ ಬ್ಲ್ಯಾಕ್ ಡೇ ಎಂದು ಕರೆಯಲಾಗುತ್ತದೆ.
ಪ್ರತಿ ವರ್ಷವೂ ಜಮ್ಮು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದ ಜಮ್ಮು ಶ್ರೀನಗರದ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿರುತ್ತದೆ. ಯೋಧರು ಹಲವಾರು ದಿನಗಳು transit ಕ್ಯಾಂಪಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಇರುತ್ತದೆ. ಆ ಸಮಯದಲ್ಲಿ CRPF ಈ ಯೋಧರು ಪ್ರತಿ ವರ್ಷ ದಂತೆ ರಜೆ ಮುಗಿಸಿಕೊಂಡು ಮರಳಿ ಜಮ್ಮುವಿನ ತರಬೇತಿ ಕ್ಯಾಂಪಿಗೆ ಜಮಾವಣೆ ಆಗುವುದು ವಾಡಿಕೆ. ಅಲ್ಲಿಯಿಂದ ಮುಂದೆ ಬಸ್ಸಿನಲ್ಲಿ ಶ್ರೀನಗರಕ್ಕೆ ಪ್ರಯಾಣ. ಅಂತೂ ಕೊನೆಗೆ ಫೆ. 13ರಂದು ಹೆದ್ದಾರಿಯನ್ನ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ.
ಅದರೆ 2019 14 ಫೆಬ್ರವರಿರಂದು ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ತಲ್ಲಣಗೊಳಿಸಿತು.
ಭಾರತೀಯ ಸೇನಾ ವಾಹನಗಳು ಜಮ್ಮುವಿನಿಂದ ಪುಲ್ವಾಮ ಮಾರ್ಗವಾಗಿ ಮಧ್ಯಾಹ್ನದ ಹೊತ್ತಿಗೆ 2547 ಜನ ಅಖPಈ ಯೋಧರ ಹೊತ್ತಿದ್ದ 78 ಸೈನ್ಯದ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಪುಲ್ವಾಮ ಮಾರ್ಗವಾಗಿ ಶ್ರೀನಗರಕ್ಕೆ ತಲುಪಲು ಸಂಚರಿಸುತ್ತವೆ.
ಇತ್ತ ಈ ಭಯೋತ್ಪಾದಕರು ಈ ಮಾಹಿತಿ ತಿಳಿದು 100 ಕೆಜಿಯಷ್ಟು ಸ್ಪೋಟಕಗಳನ್ನು ತುಂಬಿದ ವಾಹನವನ್ನು ಅದಿಲ್ ಅಹ್ಮದ್ ದರ್ ಎಂಬ ಉಗ್ರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲುವಾಮ ಜಿಲ್ಲೆಯ ಲೇತ್ಪುರ ಎನ್ನುವ ಗ್ರಾಮದಲ್ಲಿ ಹೊಂಚು ಹಾಕಿ ಕಾಯುತ್ತಿದ್ದ.
ಸುಮಾರು ಇಪ್ಪತೈದು ವಾಹನಗಳು ಹಾದು ಹೋದ ನಂತರ ತನ್ನ ವಾಹನವನ್ನು ಚಲಾಯಿಸಿ ಒಂದು ಬಸ್ಸಿಗೆ ಡಿಕ್ಕಿ ಹೊಡೆದು ಬಿಡುತ್ತಾನೆ.
ಕ್ಷಣಾರ್ಧದಲ್ಲಿ ಭೀಕರ ಸ್ಪೋಟ ಉಂಟಾಗಿ ಸೈನ್ಯದ ವಾಹನ ಮತ್ತು ಭಯೋತ್ಪಾದಕನ ವಾಹನ ಛಿದ್ರಗೊಂಡುಬಿಡುತ್ತವೆ. ಬಸ್ಸಿನಿಂದ ಹೊರಚಿಮ್ಮಿದ ದೇಹಗಳು ಹೆದ್ದಾರಿಯ ಸುತ್ತಲೂ ಚೆಲ್ಲಾಪಿಲ್ಲಿಯಾಗುತ್ತವೆ.
ಘಟನೆಯಲ್ಲಿ ನಲವತ್ತು ವೀರ ಯೋಧರು ಹುತಾತ್ಮರಾಗುತ್ತಾರೆ. ಇದರಲ್ಲಿ ಕನ್ನಡಿಗ ಯೋಧ ಗುರು ಅವರೂ ಬಲಿಯಾಗುತ್ತಾರೆ.
ಈ ಹೃದಯವಿದ್ರಾವಕ ಘಟನೆಯಿಂದ ಇಡೀ ದೇಶವೇ ಅಶ್ರುತರ್ಪಣದೊಂದಿಗೆ ಮುಳುಗುತ್ತದೆ.
ವಿಶ್ವದ ಹಲವಾರು ದೇಶಗಳು ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸುತ್ತವೆ.
ಈ ಘಟನೆಯಿಂದ ಭಾರತದ ಪಾಕಿಸ್ತಾನದೊಂದಿನ ಸಂಬಂಧ ಇನ್ನಿಲ್ಲದಂತೆ ಹದಗೆಟ್ಟುಹೋಗುತ್ತದೆ.
ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ. ಯೋಧರನ್ನು ಕಳೆದುಕೊಂಡ ಕಣ್ಣೀರಿಗೆ ಪ್ರತೀಕಾರ ಖಂಡಿತ ತೀರಿಸುತ್ತೇವೆ. ಇದಕ್ಕಾಗಿ ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದರು.
ಪಾಕ್ ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿ, ಈ ದಾಳಿ ನಡೆದು ಸರಿಯಾಗಿ 12 ದಿನಗಳ ನಂತರ ಅಂದರೆ ಕಳೆದ ವರ್ಷ ಫೆ. 26ರಂದು ಭಾರತೀಯ ವಾಯುಪಡೆಯು ಜೈಷ್ ನ ತರಬೇತಿ ಶಿಬಿರಗಳ ಮೇಲೆ ಬಾಂಬ್ ಗಳನ್ನು ಹಾಕಿ ಸಂಪೂರ್ಣ ನಾಶ ಮಾಡಿದ್ದವು.
ನಸುಕಿನ ಜಾವ 3.30ರಿಂದ 3.55ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಭಾರತದ ಸೈನ್ಯ ಹೊಡೆದು ಹಾಕಿತು.
ಆದರೆ ಪಾಕಿಸ್ತಾನ ತನ್ನ ಉಗ್ರ ಪೆÇೀಷಣೆಯನ್ನು ಮುಚ್ಚಿಕೊಳ್ಳಲು ದಾಳಿಯನ್ನು ಅಲ್ಲಗಳೆದಿತ್ತು. ಯಾವುದೇ ದಾಳಿಗಳು ನಡೆದಿಲ್ಲ ಎಂದು ಹೇಳಿಕೊಂಡಿತ್ತು.
ಅದರೆ ಬಾಲಕೋಟ್ ದಾಳಿಗೆ ಪ್ರತಿಯಾಗಿ ಪಾಕ್ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ ನ ವಿಮಾನಗಳು ಭಾರತ ಗಡಿದಾಟಲು ಬಂದಾಗ ತಕ್ಷಣ ನಮ್ಮ ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು.
ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿತ್ತು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತು.
ನಮ್ಮ ಸೇನೆಯು ಸತತವಾಗಿ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸುತ್ತಿತು.
ಪುಲ್ವಾಮಾ ದಾಳಿ ನಡೆಸಿದ 45 ದಿನಗಳಲ್ಲಿ ನಮ್ಮ ಸೇನೆಯು ವಿಶೇಷ ಕಾರ್ಯಾಚರಣೆ ಮೂಲಕ ಜೈಷ್ ಸಂಘಟನೆಯ ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್‍ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಘಾಜಿಯನ್ನು ಹತ್ಯೆ ಮಾಡುವ ಮೂಲಕ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತು. ಮತ್ತು ಜೈμï ಸಂಘಟನೆಯ ಮತ್ತೋರ್ವ ಕಮಾಂಡರ್ ಕಮ್ರಾನ್ ನನ್ನು ಸಹ ಭಾರತೀಯ ಯೋಧರು ಹತ್ಯೆ ಮಾಡಿದರು.
ಈ ಮೂಲಕ ಭಾರತದ 40 ಯೋಧರ ಬಲಿ ಪಡೆದಿದ್ದ ದಾಳಿಯ ಸಂಚುಕೋರರನ್ನು ಸೇನೆ ಹೊಡೆದುರುಳಿಸಿ ಸೇನೆಯು ತನ್ನ ಸೇಡು ತಿರಿಸಿಕೊಂಡು ವೀರ ಯೋಧರ ಬಲಿದಾನ ವನ್ನು ವ್ಯರ್ಥವಾಗದೆ ಬಿಡಲಿಲ್ಲ.
ನಮ್ಮ ಸೇನೆ ನಮ್ಮ ಹೆಮ್ಮೆ.