ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ

ಮೈಸೂರು: ಯವಕನೊಬ್ಬ ಮೈಸೂರಲ್ಲಿ ನಾಯಿ ಮೇಲೆ ಪೈಚಾಚಿಕ ಕೃತ್ಯವೆಸಿದ ಪ್ರಕರಣ ಮಾಸುವ ಮೊದಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆಸಿ ಕೊಲೆ ಮಾಡಿರುವ ಹೀನಾಯ ದುಷ್ಕøತ್ಯ ನಡೆದಿದೆ.
ಕಾಮಾಂಧರು ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವ ದುರ್ಘಟನೆ ನಡೆದಿದೆ.
ನಾಲ್ಕರಿಂದ ಐದು ಮಂದಿ ಇದ್ದ ಕಾಮುಕರ ಗುಂಪು ಸೋಮವಾರ ರಾತ್ರಿ ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ನಗರದ ಕೆ.ಟಿ.ಸ್ಟ್ರೀಟ್ ನಲ್ಲಿ ನಡೆದಿದೆ.
ಭಿಕ್ಷಕಿ ಕೆ.ಟಿ.ಸ್ಟ್ರೀಟ್ ನಲ್ಲಿ ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದ ಪುಂಡರ ಗುಂಪೆÇಂದು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಮತ್ತು ಪೆÇಲೀಸರು, ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.