ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟದ ಧಾರುಣ ದುರ್ಘಟನೆ ಮಾಸುವ ಮುನ್ನವೇ ಪ್ರಬಲ ಭೀಕರವಾದ ಇನ್ನೊಂದು ಸ್ಫೋಟ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.
ಈ ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರ ದೇಹ ಜಿಲೆಟೆನ್ ಸ್ಪೋಟದಿಂದ ಛಿದ್ರಛಿದ್ರವಾಗಿದೆ.
ಹಿರೇನಾಗವಲ್ಲಿ ಗ್ರಾಮದ ನಿವಾಸಿ ರಾಮು, ಗಂಗಾಧರ, ನೇಪಾಳ ಮೂಲದ ಮಹೇಶ, ಉಮಾ ಕಾಂತ್, ಚೇಳೂರಿನ ಅಭಿ ಸಾವನ್ನಪ್ಪಿದ ದುದೈರ್ವಿಗಳು.
ಟಾಟಾ ಎಸ್ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತಿದ್ದ ಚಾಲಕ ರಿಯಾಜ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು ಸದ್ಯ ಈತ ಪೆÇಲೀಸರ ವಶದಲ್ಲಿದ್ದಾನೆ.
ದುರಂತಕ್ಕೆ ಕಾರಣವಾದ ಈ ಕ್ರಷರ್ ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್ ಹಾಗೂ ಆಂಧ್ರ ಪ್ರದೇಶದ ಶಿವಾರೆಡ್ಡಿ, ರಾಘವೇಂದ್ರ ರೆಡ್ಡಿ ಸಂಯುಕ್ತ ಮಾಲೀಕತ್ವದ್ದು ಎಂದು ತಿಳಿದುಬಂದಿದೆ.
ಇವರ ಮಾಲೀಕತ್ವದ ಭ್ರಮರವಾಸಿನಿ ಎಂಬ ಕಲ್ಲು ಕ್ವಾರಿಯಲ್ಲಿ ಅನಧಿಕೃತವಾಗಿ ಶೇಖರಿಸಿಟ್ಟಿದ್ದ ಸ್ಪೋಟಕ ಜಿಲೆಟಿನ್ ವಸ್ತುಗಳನ್ನು ಪೆÇಲೀಸರ ಕಣ್ತಪ್ಪಿಸಿ ನಾಶಪಡಿಸಲು ನಡುರಾತ್ರಿ ಅರಣ್ಯ ಪ್ರದೇಶದತ್ತ ಕೊಂಡೊಯ್ಯುವ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ಘಟನೆ ನಂತರ ನಾಗರಾಜ್ ಪರಾರಿ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

