ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಕೋವ್ಯಾಕ್ಸಿನ್’  ಲಿಕೆ ಹಾಕಿಸಿಕೊಳ್ಳುವ ಮೂಲಕ ಎರಡನೇ ಹಂತದ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ  ಚಾಲನೆ ನೀಡಿದರು.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ  ಪ್ರಧಾನಿ ಮೋದಿ ಕೋವಿಡ್ ಲಸಿಕೆ ಹಾಕಿಸಿಕೊಂಡರು. 
ಪುದುಚೇರಿ ಮೂಲದ ಸಿಸ್ಟರ್ ಪಿ. ನಿವೇದಾ ಅವರು ಪ್ರಧಾನಿ ಮೋದಿಗೆ ಕೋವ್ಯಾಕ್ಸಿನ್ ಲಸಿಕೆ ಚುಚ್ಚಿದರು.
ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಪಡೆದ ಬಳಿಕ ಪ್ರಧಾನಿ ಮೋದಿ ಅವರು ನೀಡಿರುವ ಮೊದಲ ಪ್ರತಿಕ್ರಿಯೆಯನ್ನು ಸಿಸ್ಟರ್ ನಿವೇದಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.
‘ಆಗಲೇ ಆಗೋಯ್ತಾ? ನನ್ನ ಅನುಭವಕ್ಕೂ ಕೂಡಾ ಬರಲಿಲ್ಲ’ ಎಂದು ನರೇಂದ್ರ ಮೋದಿ ಪ್ರತಿಕ್ರಿಯಿಸಿರುವುದಾಗಿ ಸಿಸ್ಟರ್ ನಿವೇದಾ ತಿಳಿಸಿದರು.