ಮೈಸೂರು:ಸಿದ್ದರಾಮಯ್ಯಗೆ ಜನತಾದಳದ ಶಕ್ತಿಯನ್ನು ಅವರ ತವರು ಜಿಲ್ಲೆ ಮೈಸೂರಿನಲೇ ತೋರಿಸಿದ್ದೇವೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಶಾಸಕ ಸಾ.ರಾ.ಮಹೇಶ್ ಮಾತನಾಡಿದರು.
ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ, ಕೊನೆ ಕ್ಷಣದಲ್ಲಿ ಕೈ ಮೈತ್ರಿ ಆಗಲು ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಕಾರಣ. ಅವರು ಬಂದಿದ್ದರೆ ನಾವು ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ಹೇಳಿಕೆ ಬಿಟ್ಟರೆ ಕಾಂಗ್ರೆಸ್ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಕೂಡಾ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿದರು. ನಾನು ರಾಜ್ಯಾಧ್ಯಕ್ಷನಾಗಿರುವಾಗ ಮೈಸೂರು ಮೇಯರ್ ಸ್ಥಾನ ಪಡೆಯಲಿಲ್ಲ ಎಂಬಂತಾಗುತ್ತದೆ. ಆದ್ದರಿಂದ, ಕಾಂಗ್ರೆಸ್ ಜೊತೆ ಬನ್ನಿ ಎಂದು ಹೇಳಿದರು ಎಂದರು.
ಈ ವಿಷಯವನ್ನು ನಾವು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು. ಬಳಿಕ ತನ್ವಿರ್ ಸೇಠ್ ಮತ್ತೊಮ್ಮೆ ಬಂದು ಮಾತನಾಡಿದರು. ನಂತರ ಧ್ರುವನಾರಾಯಣ್ ಸಹ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸ್ವತಂತ್ರ ಸ್ಪರ್ಧೆಗೆ ತೀರ್ಮಾನ ಮಾಡಿದ್ದೆವು. ಸೆಮಿವುಲ್ಲಾ. ಕೆ.ವಿ.ಶ್ರೀಧರ್ ಹಾಗೂ ಮಾ.ವಿ.ರಾಮ್ ಪ್ರಸಾದ್ ಬೆಂಬಲ ಪಡೆದಿದ್ದೆವು. ಪಕ್ಷೇತರರ ಬೆಂಬಲ ಪಡೆದು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತವಿತ್ತು ಎಂದು ಅವರು ವಿವರಿಸಿದರು.
ಮುಂದಿನ ಸಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡುತ್ತೇವೆ. ಆದರೆ, ಕಾಂಗ್ರೆಸ್ ನಾಯಕರ ಮಾತಿನ ಮೇಲೆ ಹಿಡಿತವಿರಬೇಕು ಎಂದು ಅವರು ಹೇಳಿದರು.
ಈ ಬಾರಿಯೇ ಕೊಡುತ್ತಿದ್ದೆವು ಆದರೆ, ಪಕ್ಷದ ಬಗ್ಗೆ ಹೀನಾಯವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ. ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೆವು ಎಂದರು.
ತನ್ವೀರ್ ಸೇಠ್ ಜೆಡಿಎಸ್‌ಗೆ ಬಂದರೆ ಸ್ವಾಗತ ಎಂದು ಸಾ.ರಾ. ಮಹೇಶ್ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯಗೆ ಜನತಾದಳದ ಶಕ್ತಿ ತೋರಿಸಿದ್ದೇವೆ – ಶಾಸಕ ಸಾ.ರಾ.ಮಹೇಶ್

