ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ – ಸಚಿವ ಸಿ.ಪಿ ಯೋಗೇಶ್ವರ್

ಮೈಸೂರು: ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದರು. 
ನಗರದಲ್ಲಿ  ಮಂಗಳವಾರ  ಅವರು ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದರು.
ಜೆಡಿಎಸ್‌ಗೆ ಶಕ್ತಿ ತುಂಬಿದ್ರೆ ಅದು ನಮಗೆ ಮಾರಕ ಎಂದರು.
 ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ. ಆದರೂ ಅವರು ಅದನ್ನು ಮುಂದುವರಿಸಿದರು. ನನಗೆ ತುಂಬಾ ಘಾಸಿ ಆಯ್ತು, ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ ಎಂದು ಅವರು ತಿಳಿಸಿದರು.
ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ತಪ್ಪು, ನನಗೂ ಗೊತ್ತಿದೆ. ಅದನ್ನು ನೀವು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹೇಳಿದರೆ ಒಳ್ಳೆಯದು ಎಂದು  ಸಿಪಿ ಯೋಗೇಶ್ವರ್ ಹೇಳಿದರು. 
 ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟೋದು ನನ್ನ ಸಂಕಲ್ಪ ಎಂದರು. 
ಮಹಾಘಟಬಂಧನ್ ಮಾಡಿಕೊಂಡು ದೇಶ ಆಳಲು ಹೊರಟಿದ್ದರು. ಹಾಗಾಗಿ ಜೆಡಿಎಸ್‌ ಅನ್ನು ನಾವು ನಂಬುವಂತಿಲ್ಲ ಎಂದು ಸಚಿವ ಯೋಗೇಶ್ವರ್ ಹೇಳಿದರು.