ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರನ್ನ ಸಂಪುಟದಿಂದ ವಜಾ ಮಾಡಿ -ಶಾಸಕ ಸಾ.ರಾ. ಮಹೇಶ್

ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರನ್ನ ಸಂಪುಟದಿಂದ ವಜಾ ಮಾಡಿ ಎಂದು  ಶಾಸಕ  ಸಾ.ರಾ.  ಮಹೇಶ್  ಒತ್ತಾಯಿಸಿದರು. 
ನಗರದಲ್ಲಿ  ಶನಿವಾರ  ಸಾ.ರಾ. ಮಹೇಶ್  ಮಾಧ್ಯಮ  ಪ್ರತಿನಿಧಿಗಳೂಂದಿಗೆ ಮಾತನಾಡಿದರು. 
ಇದನ್ನ ಸದನಲ್ಲು ಒತ್ತಾಯ ಮಾಡ್ತಿವಿ ಎಂದರು. 
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಅರ್ಜಿ ಹಾಕಿರೋದೆ ನಾವೇಲ್ಲ ತಲೆ ತಗ್ಗಿಸೋ ವಿಚಾರ.
ಇದೇಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ ಅದು ಆಚೆಗೆ ಬರಬೇಕು ಎಂದು ಅವರು ಹೇಳಿದರು. 
ಬಾಂಬೆಯಲ್ಲು ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡಿದ್ದವರು ಯಾಕೇ ಅರ್ಜಿ ಹಾಕಿದ್ದೀರಿ ಎಂದು  ಅವರು  ಪ್ರಶ್ನಿಸಿ, ಇವರನ್ನ ಇಟ್ಟುಕೊಂಡು ಬ್ಲಾಕ್‌ಮೆಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ ಎಂದರು. 
ಸಚಿವರನ್ನೆ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು? . ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು  ಸಾ.ರಾ. ಮಹೇಶ್  ಹೇಳಿದರು. 
ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ.
ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆತಿನಿ ಅಂದಿದ್ರು ಬಹುಶ ಅದ್ರಲ್ಲಿ ಇದು  ಉಲ್ಲೇಖ ಆಗಬಹುದು.
ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದ್ರು.
ಬಾಂಬೆನಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ.
ಅದನ್ನ ಮಾತನಾಡೋಕು ಅಸಹ್ಯ ಆಗುತ್ತೆ.
ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ‌ ಎಂದರು. 
ನಿಮಗೆ ಯಾಕೇ ಅನುಮಾನ. ಮೊನ್ನೆಯು ಅನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನ ತಕ್ಷಣ ಯಾಕೇ ಅರೆಸ್ಟ್ ಮಾಡಲಿಲ್ಲ ಎಂದು  ಅವರು ಪ್ರಶ್ನಿಸಿದರು .
ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೋ?.
ಈ ರೀತಿಯ ಸರ್ಕಾರ ತರೋಕಾ ಬಾಂಬೆಗೆ ಹೋಗಿದ್ದು.
ಇದೇನಾ ನಿಮ್ಮ ಘನಕಾರ್ಯ ಎಂದರು ಅವರು  ಹೇಳಿದರು.