ಬೆಂಗಳೂರು: ಸಿಡಿ ಮಾಡಿಸಿದ್ದೇ ಕಾಂಗ್ರೆಸ್ ನವರು ಎಂದು ಸಹಕಾರ ಖಾತೆ ಸಚಿವ ಎಸ್.ಟಿ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಸೋಮಶೇಖರ್ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಮೇಶ್ ಜಾರಕಿಹೊಳಿ ಸಿಡಿ ಯನ್ನು ಮಾಡಿದ್ದು ಕಾಂಗ್ರೆಸ್ ನವರೇ, ಮತ್ಯಾರು ಮಾಡ್ತಾರೆ, ಇಂತಹ ಮನೆಹಾಳ್ ಕೆಲಸ ಮಾಡೋದು ಕಾಂಗ್ರೆಸ್ ನವರೇ ಎಂದು ಸಚಿವ ಎಸ್.ಟಿ.ಎಸ್. ಹೇಳಿದರು.
ನಾನು 20 ವರ್ಷ ಕಾಂಗ್ರೆಸ್ ನಲ್ಲಿ ಇದ್ದೆ. ಅವರು ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ರಾಜಕೀಯ ಷಡ್ಯಂತ್ರದಿಂದ ಮಾನ ಹಾನಿಯಾಗಬಾರದು. ಎಂಬ ಕಾರಣಕ್ಕಾಗಿ ನಾವು ಆರು ಜನ ಸಚಿವರು ಕೋರ್ಟ್ ಗೆ ಮೊರೆ ಹೋಗಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ರಾಜಕೀಯವಾಗಿ ಮಾತನಾಡಲಿ, ನಮ್ಮ ಇಲಾಖೆ ಬಗ್ಗೆ ಮಾತನಾಡಲಿ ಉತ್ತರಿಸುತ್ತೇವೆ. ಅದನ್ನು ಬಿಟ್ಟು ಈ ರಿತಿ ಸಿಡಿ ಮಾಡಿ ಮಾನ ಮರ್ಯಾದೆ ಹಾಳು ಮಾಡುವುದು ಸರಿಯೇ ಎಂದರು.
ತಾಕತ್ತಿದ್ದರೆ ನನ್ನ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ಎಂದು ಸಚಿವ ಸೋಮಶೇಖರ್ ಸವಾಲು ಹಾಕಿದರು.
ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಸಚಿವ ಸೋಮಶೇಖರ್ ಅವರು ಆಗ್ರಹಿಸಿದರು.

