ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ತನಿಖೆಯನ್ನು ಎಸ್‍ಐಟಿಗೆ ನೀಡಿರುವುದು ತಿಪ್ಪೆ ಸಾರಿಸಲು ಎಂದು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಹೆಚ್.ಡಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇದು ಕೂಡ ನಕಲಿ ಸಿಡಿ ಎನ್ನುವ ವರದಿ ಬರುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಿಡಿ ಪ್ರಕರಣದಲ್ಲಿ ಕ್ಲೀನ್‍ಚಿಟ್ ಸಿಗುತ್ತದೆ ಎಂದವರು ಮಾರ್ಮಿಕವಾಗಿ ನುಡಿದರು.
ಭ್ರಷ್ಟ ಅಧಿಕಾರಿಗಳ ಹಣದ ಸಮೇತ ಸಿಕ್ಕಿಬಿದ್ದರೂ ಒಬ್ಬರಿಗೂ ಶಿಕ್ಷೆ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇವೆಲ್ಲ ಕಾಟಾಚಾರದ ತನಿಖೆ ಎಂದರು.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿಕೆ, ಜೆಡಿಎಸ್ ಪಕ್ಷದ ಬಾಗಿಲು ತೆರೆದಿದೆ. ಯಾರು ಬೇಕಾದರೂ ಹೋಗಬಹುದು, ಯಾರು ಬೇಕಾದರೂ ಬರಬಹುದು ಎಂದು ಹೇಳಿ, ಪಕ್ಷದಿಂದ ಪ್ರಯೋಜನ ಪಡೆದು ಸಾಕಷ್ಟು ಜನ ಚೂರಿ ಹಾಕುತ್ತಾರೆ. ಅವರಿಗೆ ಜನರೇ ಉತ್ತರ ಕೊಡುತ್ತಾರೆಂದರು.
ನಕಲಿ ಸಿಡಿ ಎನ್ನುವ ವರದಿ ಬರುತ್ತದೆ -ಹೆಚ್.ಡಿಕೆ

