ಬೆಳಗಾವಿ: ನಾನು ನಿಡಗುಂದಿಗೆ ಸಂತ್ರಸ್ತ ಯುವತಿ ಹುಡುಕಿಕೊಂಡು ಹೆಲಿಕಾಪ್ಟರ್‍ನಲ್ಲಿ ಹೋಗಿದ್ದೆ ಎನ್ನುವುದು ಕೇವಲ ಊಹಾಪೆÇೀಹ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸತೀಶ ಜಾರಕಿಹೊಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಿ ಎಸ್‍ಐಟಿ ವರದಿ ಮಾತ್ರ ನೀಡುತ್ತದೆ. ಎಫ್‍ಐಆರ್ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯ ಎಂದು ಹೇಳಿದರು.
ಎಸ್‍ಐಟಿ ರಚನೆ ಬಗ್ಗೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು ಸೇರಿದಂತೆ ಹಲವು ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ ಸರಿ ಇದೆ ಎಂದರು.
ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಲಿ. ಸತ್ಯಾಸತ್ಯತೆ ಹೊರಬರಲಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.
ನಾನು ಸಂತ್ರಸ್ತ ಯುವತಿ ಹುಡುಕಿಕೊಂಡು ಹೋಗಿರಲಿಲ್ಲ -ಸತೀಶ ಜಾರಕಿಹೊಳಿ

