ಬೆಂಗಳೂರು: ವಕೀಲರ ಸಲಹೆಯಂತೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅಧಿಕೃತವಾಗಿ ಇಂದು ದೂರು ನೀಡಿದ್ದೇನೆ. ವಕೀಲರ ಸಲಹೆಯಂತೆ ದೂರಿನಲ್ಲಿ ನಾನು ಯಾರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಅವರು ತಿಳಿಸಿದರು.
ಇಂದು ದೂರು ದಾಖಲಾಗಿದೆ. ನಾನು ಹೆಸರು ಹೇಳಿದರೆ ತಪ್ಪಾಗುತ್ತದೆ. ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಆರೋಪಿಗಳು ಯಾರು ಎಂಬುದು ಗೊತ್ತಾಗಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪೊಲೀಸರು ತನಿಖೆಗೆ ಕರೆದರೆ ಹೋಗುತ್ತೇನೆ ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ 2+3+4 ಪ್ರಮುಖ ಆರೂಪಿಗಳು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಪ್ರಕರಣದಲ್ಲು ಇನ್ನೂ ತುಂಬಾ ಜನ ಇದ್ದಾರೆ. ಅವರ ಹೆಸರು ಶೀಘ್ರದಲ್ಲಿಯೇ ಹೊರ ಬರಲಿದೆ ಎಂದು ಅವರು ಹೇಳಿದರು.
ನಾನೊಬ್ಬನೇ ಬಲಿಪಶು ಅಲ್ಲ. ಎಲ್ಲರಿಗೂ ಬ್ಲ್ಯಾಕ್‍ಮೇಲ್ ಮಾಡಲಾಗಿದೆ ಎಂದರು.
ವಕೀಲರ ಸಲಹೆಯಂತೆ ದೂರು ನೀಡಿದ್ದೇನೆ -ಮಾಜಿ ಸಚಿವ ರಮೇಶ್ ಜಾರಕಿ ಹೊಳಿ

