ಬೆಂಗಳೂರು: ಸಿಡಿ ಬಿಡುಗಡೆ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೊಲೀಸರಿಗೆ ದೂರನ್ನು ಶನಿವಾರ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಮಾಜಿ ಶಾಸಕ ನಾಗರಾಜ್ ಮೂಲಕ ಲಿಖಿತ ರೂಪದಲ್ಲಿ ನಗರದ ಸದಾಶಿವನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿಡಿಯಲ್ಲಿರುವುದು ನಾನಲ್ಲ. ಈ ಕುರಿತು ಸೂಕ್ತ ತನಿಖೆ ಮಾಡಿ ಎಂದು ದೂರಿನಲ್ಲಿ ರಮೇಶ್ ಜಾರಕಿಹೊಳಿ ಉಲ್ಲೇಖಿಸಿದ್ದಾರೆ.
ದೂರು ನೀಡಿದ ರಮೇಶ್ ಜಾರಕಿಹೊಳಿ

