ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಸಿಡಿಯಲ್ಲಿನ ಯುವತಿ ಮತ್ತೊಂದು ವಿಡಿಯೋ ಮಾಡಿ ಬಿಡುಗಡೆಗೊಳಿಸಿದ್ದಾರೆ.
ನನಗೆ ನನ್ನ ತಂದೆ ತಾಯಿಯ ಸುರಕ್ಷತೆಯೇ ಮುಖ್ಯ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು. ನನ್ನ ತಂದೆ ತಾಯಿ ಸ್ವಚ್ಛೆಯಿಂದ ದೂರು ಕೊಟ್ಟಿಲ್ಲ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೇ ಆಗ ನಾನು ಎಸ್ ಐಟಿ ಮುಂದೆ ಹಾಜರಾಗುವೆ ಎಂದು ವಿಡಿಯೋದಲ್ಲಿ ಯುವತಿ ತಿಳಿಸಿದ್ದಾರೆ.
ಮಾರ್ಚ್ 12ರಂದೇ ನಗರ ಪೆÇಲೀಸ್ ಆಯುಕ್ತರು, ಎಸ್ ಐಟಿಗೆ ವಿಡಿಯೋ ಕಳಿಸಿದ್ದೆ. ಆದರೆ ನಾನು ವಿಡಿಯೋ ಕಳಿಸಿದ್ದ ದಿನ ವಿಡಿಯೋ ಬಿಡುಗಡೆಯಾಗಲಿಲ್ಲ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ದೂರು ನೀಡಿದ ಅರ್ಧ ಗಂಟೆ ಬಳಿಕ ವಿಡಿಯೋ ರಿಲೀಸ್ ಆಗಿದೆ ಎಂದು ಯುವತಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹೀಗಾಗಿ ನನಗೆ ಏನಾಗುತ್ತಿದೆಯೋ ಗೊತ್ತಿಲ್ಲ. ಎಸ್ ಐಟಿ ಯಾರ ಪರವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಯುವತಿ ವಿಡಿಯೋದಲ್ಲಿ ತಿಳಿಸಿದ್ದಾರೆ.