ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದಲ್ಲಿ ಯಾರ ಒತ್ತಡ, ಪ್ರಭಾವಕ್ಕೆ ತಲೆಕೆಡಿಸಿಕೊಳ್ಳದೇ ಎಸ್‍ಐಟಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಗೃಹ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರಣಿಯಾಗಿ ಬಿಡುಗಡೆಗೊಂಡ ವಿಡಿಯೋ, ಆಡಿಯೋ ಹಾಗೂ ಸಿಡಿಗಳನ್ನಿಟ್ಟುಕೊಂಡು ಎಸ್‍ಐಟಿ ಪರಿಶೀಲನೆ ನಡೆಸಲಿದೆ ಎಂದು ಗೃಹ ಸಚಿವರು ತಿಳಿಸಿದರು.
ಪ್ರಕರಣದ ತನಿಖೆಯನ್ನು ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ಮಾಡುತ್ತೇವೆ. ಯಾರ ಪರ, ಯಾರ ವಿರುದ್ಧ ತನಿಖೆ ಮಾಡುವುದಿಲ್ಲ ಎಮದು ಅವರು ಎಂದು ಹೇಳಿದರು.
ಸಿಡಿ ಪ್ರಕರಣ: ನ್ಯಾಯಸಮ್ಮತವಾಗಿ ತನಿಖೆ -ಬಸವರಾಜ ಬೊಮ್ಮಾಯಿ

