ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಯುವತಿ ಪೆÇೀಷಕರು ಶನಿವಾರ ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್ ಸೆಲ್‍ಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.
ಯುವತಿಯ ಪೆÇೀಷಕರನ್ನು ಎಸ್‍ಐಟಿ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಖುದ್ದು ಯುವತಿಯ ಪೆÇೀಷಕರು ಮತ್ತು ತಮ್ಮಂದಿರ ವಿಚಾರಣೆ ನಡೆಸಿದ್ದಾರೆ.
ತನ್ನ ಪೆÇೀಷಕರಿಗೆ ಜೀವಭಯವಿದೆ ಎಂದು ಸಂತ್ರಸ್ತ ಯುವತಿ ಹೇಳಿದ್ದರಿಂದ ಅವರಿಗೆ ಭದ್ರತೆ ನೀಡುತ್ತಿದ್ದೇವೆ ಎಂದು ಎಸ್‍ಐಟಿ ತಿಳಿಸಿದೆ.
ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಯುತಿ ಕೇಸ್ ದಾಖಲಿಸಿದ್ದರು.
ಇದಾದ ನಂತರ ಆ ಯುವತಿ ತನ್ನ ಮನೆಯವರೊಂದಿಗೆ ಮಾತನಾಡಿರುವ ಆಡಿಯೋ ಲೀಕ್ ಆಗಿತ್ತು.
ಯುವತಿ ನನ್ನ ಪೆÇೀಷಕರನ್ನು ಬೆಂಗಳೂರಿಗೆ ಕರೆಸಿ, ಭದ್ರತೆ ನೀಡಬೇಕು. ಅವರು ಎಲ್ಲಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ. ಅವರ ಮತ್ತು ನನ್ನ ಜೀವಕ್ಕೆ ಅಪಾಯವಿದೆ. ನನ್ನ ತಂದೆ-ತಾಯಿಯ ಎದುರಲ್ಲೇ ನಾನು ಎಸ್‍ಐಟಿ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಶನಿವಾರ ಮುಂಜಾನೆ ಬಿಡುಗಡೆಯಾದ ವಿಡಿಯೋ ಸಂದೇಶದಲ್ಲಿ ಸಂತ್ರಸ್ಥ ಯುವತಿ ಹೇಳಿದ್ದಳು.
ಅದರಂತೆ ಆ ಯುವತಿಯ ಪೆÇೀಷಕರು ಬೆಂಗಳೂರಿನಲ್ಲಿ ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ.
ಎಸ್‍ಐಟಿಯಿಂದ ಸಿಡಿ ಯುವತಿ ಪೆÇೀಷಕರ ವಿಚಾರಣೆ

