ಡಿಕೆ ಶಿವಕುಮಾರ್ ಇದೆಲ್ಲವನ್ನು ಮಾಡಿಸಿದ್ದಾರೆ -ಸಿಡಿ ಲೇಡಿ ಪೋಷಕರ ಗಂಭೀರ ಆರೋಪ

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಸಿಡಿ ಲೇಡಿ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಎಸ್ ಐಟಿ ವಿಚಾರಣೆ ನಂತರ ಸಿಡಿ ಲೇಡಿ ಪೋಷಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಎಲ್ಲವನ್ನು ಮಾಡಿಸಿದ್ದಾರೆಂದರು.
ಡಿಕೆ ಶಿವಕುಮಾರ್ ತನ್ನ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಹೆಣ್ಣುಮಗಳನ್ನು ಇಟ್ಟುಕೊಂಡು ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ತಂದೆ ಹೇಳಿದರು.
ನಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಯವತಿಯ ಸಹೋದರ ಮಾತನಾಡಿ, ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆಂದರು.
ನನ್ನ ಅಕ್ಕನನ್ನು ಗೋವಾಕ್ಕೆ ಇವರೇ ಕಳುಹಿಸಿದ್ದಾರೆ ಎಂದು ಯವತಿ ಸಹೋದರ ಹೇಳಿದ್ದಾರೆ.
ನರೇಶ್ ಗೌಡ ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.
ನಮ್ಮ ಅಕ್ಕ ನಮಗೆ ವಾಪಸ್ ಬೇಕು, ಡಿಕೆ ಶಿವಕುಮಾರ್ ಇಂತಹ ರಾಜಕೀಯ ಮಾಡಬಾರದು ಎಂದರು.
ನಮಗೆ ಯಾರಿಂದಲೂ ಯಾವುದೇ ರೀತಿಯ ಬೆದರಿಕೆ ಇಲ್ಲ, ಪೆÇಲೀಸರು ಭದ್ರತೆ ನೀಡುತ್ತಿದ್ದಾರೆ ಎಂದು ಯುವತಿಯ ಸಹೋದರ ತಿಳಿಸಿದರು.