ಬೆಂಗಳೂರು: ಯುವತಿಯ ಪೆÇೀಷಕರು ನೇರವಾಗಿ ಹೇಳಿದ್ದಾರೆ. ಇನ್ನು ನಾನು ಹೇಳುವುದು ಏನು ಇಲ್ಲ ಎಂದು ರಮೇಶ್ ಜಾರಕಿ ಹೊಳಿ ಹೇಳಿದರು.
ನಗರದಲ್ಲಿ ಶನಿವಾರ ರಮೇಶ್ ಜಾರಕಿ ಹೊಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿಡಿ ಪ್ರಕರಣದ ಸಂಬಂಧ ಷಡ್ಯಂತ್ರ ನಡೆಸಿರುವ ಆ ಮಹಾನಾಯಕ ಹೆಸರನ್ನು ಯುವತಿಯ ಪೆÇೀಷಕರು ನೇರವಾಗಿ ಹೇಳಿದ್ದಾರೆ. ಇನ್ನು ನಾನು ಹೇಳುವುದು ಏನು ಇಲ್ಲ ಎಂದು ರಮೇಶ್ ಜಾರಕಿ ಹೊಳಿ ಹೇಳಿದರು.
ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಅವರು ತಿಳಿಸಿದರು.
ನನ್ನ ವಿರುದ್ಧ ಸಿಡಿ ಷಡ್ಯಂತ್ರ ನಡೆಸಿರುವ ಡಿಕೆ ಶಿವಕುಮಾರ್ ಗಾಂ… ನಾನು ಗಂಡಸು ಎಂದು ರಮೇಶ್ ಜಾರಕಿ ಹೊಳಿ ಹೇಳಿದರು.
ರಾಜಕೀಯಕ್ಕೆ ಡಿಕೆಶಿ ನಾಲಯಕ್ಕು ಎಂದು ಗಂಭೀರ ಆರೋಪವನ್ನು ರಮೇಶ್ ಮಾಡಿದ್ದಾರೆ.
ನನ್ನ ಬಳಿ 11 ಸಾಕ್ಷ್ಯಗಳಿವೆ. ನಾನು ಅವುಗಳನ್ನು ಎಸ್ ಟಿಗೆ ನೀಡುತ್ತೇನೆ. ಡಿಕೆಶಿವಕುಮಾರ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು ಎಂದರು.
ನಾನು ಚುನಾವಣೆಗೆ ನಿಲ್ಲುವುದಿಲ್ಲ. ಗೋಕಾಕ್ ನಲ್ಲಿ ನನ್ನ ತಮ್ಮನನ್ನು ನಿಲ್ಲಿಸಿ ಆತನನ್ನು ಗೆಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಇನ್ನು ಡಿಕೆ ಶಿವಕುಮಾರ್ ಕನಕಪುರದಲ್ಲಿ ಸೋಲಿಸುತ್ತೇನೆ ಎಂದು ರಮೇಶ್ ಜರಕಿ ಹೊಳಿ ಸವಾಲು ಹಾಕಿದರು.
ಯುವತಿ ಪೆÇೀಷಕರು ನೇರವಾಗಿ ಹೇಳಿದ್ದಾರೆ; ನಾನು ಹೇಳುವುದು ಏನು ಇಲ್ಲ -ರಮೇಶ್ ಜಾರಕಿ ಹೊಳಿ

