ಹೆಚ್ ಡಿಕೆ ಚುನಾವಣಾ ಪ್ರಚಾರಕ್ಕೆ ಹೋದರೆ ಬಂಧನ ಭೀತಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಬಂಧನ ಭೀತಿ ಎದುರಾಗಿದೆ.
ಹಲಗೆ-ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ಗೆ ಹಾಜರಾಗಿರಲಿಲ್ಲ.
ನ್ಯಾಯಾಲಯ ಖುದ್ದು ಹಾಜರಿಗೆ ಸೂಚಿಸಿದರೂ, ಹೋಂ ಕ್ವಾರಂಟೈನ್ ಕಾರಣ ನೀಡಿ ಕುಮಾರಸ್ವಾಮಿ ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಶ್ರೀಧರ್ ಗೋಪಾಲಕೃಷ್ಣ ಅವರು, ಮುಂದಿನ ವಿಚಾರಣೆ ನಡೆಯುವ ಏ. 17ರವರೆಗೆ ಕುಮಾರಸ್ವಾಮಿ ಯಾವುದೇ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬಾರದು. ಎಲ್ಲಾದರು ಕುಮಾರಸ್ವಾಮಿ ಕಾಣಿಸಿಕೊಂಡರೆ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಹಿನ್ನೆಲೆ ಹೆಚ್ ಡಿಕೆ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಕೋರ್ಟ್‍ಗೆ ವಕೀಲರು ಮಾಹಿತಿ ನೀಡಿದ್ದರು.