ನಾನು ರೆಬಲ್ ಅಲ್ಲ, ನಾನು ಪಕ್ಷಕ್ಕೆ ಲಾಯಲ್ -ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು: ನಾನು ರೆಬಲ್ ಅಲ್ಲ, ನಾನು ಪಕ್ಷಕ್ಕೆ ಲಾಯಲ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸಚಿವ ಈಶ್ವರಪ್ಪನವರು ಮಾತನಾಡಿದರು.
ನಾನು ಪತ್ರ ಬರೆದ ಬಗ್ಗೆ ಕೆಲವು ಕಡೆ ನನ್ನ ಮತ್ತು ಯಡಿರೂರಪ್ಪನವರ ನಡುವೆ ಬಿರುಕು ಎಂದೆಲ್ಲ ವರದಿ ಆಗಿದೆ. ನಾನು ಪಕ್ಷದ ವಿರುದ್ಧ ರೆಬಲ್ ಅಂತ ಹೇಳುತ್ತಿದ್ದಾರೆ. ನಾನು ರೆಬಲ್ ಅಲ್ಲ, ನಾನು ಪಕ್ಷಕ್ಕೆ ಲಾಯಲ್ ಎಂದು ಹೇಳಿದರು.
ನೀತಿ ನಿಯಮ ಮೀರಬಾರದೆಂಬ ಹಿನ್ನೆಲೆಯಲ್ಲಿ ನಾನು ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.
ಹಣವನ್ನು ನಮ್ಮ ಇಲಾಖೆ ಕೊಡಲಿ. ನಾವು ಸಿಎಂ ಹೇಳಿದವರಿಗೆ ಹಣ ಕೊಡುತ್ತೇನೆ. ಒಮ್ಮೆ ಈ ಪದ್ದತಿ ಮುರಿದರೆ ಮುಂದೆ ಯಾರಾದರೂ ಇದನ್ನ ಮಾಡಬಹುದು. ಅದಕ್ಕಾಗಿ ನಾನು ಪತ್ರ ಬರೆದಿರುವುದು ಎಂದು ಈಶ್ವರಪ್ಪನವರು ಹೇಳಿದರು.
ಇದು ಇಲಾಖೆಯ ಸಚಿವರ ಗಮನಕ್ಕೆ ಬಾರದೆ ಶಾಸಕರಿಗೆ ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ನೇರವಾಗಿ ಹಣ ಹಂಚಿಕೆ ಆಗಿರೋದು ಕಾನೂನು ಉಲ್ಲಂಘನೆ ಎಂದು ಅವರು ಹೇಳಿದರು.
ಇದು ನನ್ನ ಯಡಿಯೂರಪ್ಪನವರ ವೈಯಕ್ತಿಕ ವಿಚಾರ ಅಲ್ಲ. ನಿಯಮ ಉಲ್ಲಂಘನೆ ಆಗಬಾರದು ಎಂಬುದು ನನ್ನ ಆಶಯ ಎಂದರು ಈಶ್ವರಪ್ಪನವರು.
ಹಣ ಬಿಡುಗಡೆ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಅದನ್ನು ಸರಿಪಡಿಸಿ ಎಂದು ನಾನು ಆಡಳಿತಾತ್ಮಕವಾಗಿ ಪತ್ರ ಬರೆದಿದ್ದೇನೆ ಅಷ್ಟೇ ಎಂದರು.
ಹಣ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಗಳ ಕುಟುಂಬದವರಿದ್ದರಾ ಎಂಬ ಪ್ರಶ್ನೆಗೆ ಈಶ್ವರಪ್ಪನವರು ಉತ್ತರಿಸಿ, ನನಗೆ ಗೊತ್ತಿಲ್ಲ ಎಂದರು.
ಕೆಲ ವಿಚಾರದಲ್ಲಿ ನಾನು ಮತ್ತು ಯಡಿಯೂರಪ್ಪನವರು ದೂರ ಇದ್ದೇವೆ ಎಂದು ಈಶ್ವರಪ್ಪನವರು ಹೇಳಿದರು.