ಬೆಂಗಳೂರು: ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ ಎಂದು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಐಜಿಪಿ ಪ್ರವೀಣ್ ಸೂದ್ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಐಜಿಪಿ ಪ್ರವೀಣ್ ಸೂದ್ ಅವರು ಮಾತನಾಡಿ, ತನಿಖೆ ಪೂರ್ಣಗೊಂಡು ಬಂಧಿಸಿಲ್ಲ ಎಂದರೆ ಪ್ರಶ್ನಿಸಬೇಕು. ಹಂತ, ಹಂತವಾಗಿ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಂತ್ರಸ್ತೆಯನ್ನು ಎಸಿಪಿ ಕವಿತಾ ವಿಚಾರಣೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಸಿಡಿ ಪ್ರಕರಣ: ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ -ಐಜಿಪಿ ಪ್ರವೀಣ್ ಸೂದ್

