ಎಸ್‍ಐಟಿ ವಿಚಾರಣೆಗೆ ರಮೇಶ್ ಜಾರಕಿಹೊಳಿ ಗೈರು

ಬೆಂಗಳೂರು: ಎಸ್‍ಐಟಿ ಮುಂದೆ ಮಂಗಳವಾರ ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರ ಪರ ವಕೀಲ ಶ್ಯಾಮ್ ಸುಂದರ್, ರಮೇಶ್ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆ ಹಿನ್ನಲೆ ವಿಚಾರಣೆಗೆ ಹಾಜರಾಗಿಲ್ಲ ಎಂದರು.
ಎಸ್‍ಐಟಿ ಅಧಿಕಾರಗಳಿಗೆ ಈ ಕುರಿತು ಮಾಹಿತಿ ನೀಡÀಲಾಗಿದೆ. ಎರಡು ದಿನಗಳ ಕಾಲಾವಕಾಶ ಕೇಳಲಾಗಿದೆ ಎಂದು ತಿಳಿಸಿದರು.
ಎಸ್ ಐಟಿ ಅಧಿಕಾರಿಗಳು ಮತ್ತೊಮ್ಮೆ ನೊಟೀಸ್ ನೀಡುವುದಾಗಿ ತಿಳಿಸಿದ್ದಾರೆಂದರು.
ರಮೇಶ್ ಜಾರಕಿ ಹೊಳಿ ಅವರಿಗೆ ಬಂಧನದ ಭೀತಿ ಇಲ್ಲ. ಅನಾರೋಗ್ಯದ ಹಿನ್ನಲೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಗೋಕಾಕ್‍ನಲ್ಲಿಯೇ ಇದ್ದಾರೆ ಎಂದು ಶ್ಯಾಮ್ ಸುಂದರ್ ಅವರು ತಿಳಿಸಿದರು.