ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ಕಫ್ರ್ಯೂವನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗುರುವಾರ ಸಂಜೆ ಸಭೆ ನಂತರÀ ಸಿಎಂ ಬಿ.ಎಸ್.ಯಡಿಯೂರಪ್ಪ ಕೊರೊನಾ ಕಫ್ರ್ಯೂ ಘೋಷಣೆ ಮಾಡಿದ್ದಾರೆ.
ಏ. 10ರಿಂದ 20ರವರೆಗೆ ಕೊರೊನಾ ಕಫ್ರ್ಯೂ ಜಾರಿಯಲ್ಲಿರಲಿದೆ.
ಬೆಂಗಳೂರು, ಮೈಸೂರು, ಬಳ್ಳಾರಿ, ಕಲಬುರಗಿ, ಮಣಿಪಾಲ, ತುಮಕೂರು, ಬೀದರ್, ಉಡುಪಿ, ಮಂಗಳೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ಕಫ್ರ್ಯೂ ಜಾರಿಗೆ ಬರಲಿದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಕಮರ್ಷಿಯಲ್ ಚಟುವಟಿಕೆಗಳ ಮೇಲೆ ನಿಬರ್ಂಧ ಹಾಕಲಾಗಿದೆ.
7 ನಗರಗಳಲ್ಲಿ 10 ದಿನ ಪ್ರಾಯೋಗಿಕವಾಗಿ ಕೊರೊನಾ ಕಫ್ರ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ.
ಕಫ್ರ್ಯೂ ಅವಧಿ ವೇಳೆ ಹೊಟೇಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋರೆಂಟ್, ಸಿನಿಮಾಗಳು ಬಂದ್ ಆಗಲಿವೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ -ಸಿಎಂ ಯಡಿಯೂರಪ್ಪ

