ಬೆಂಗಳೂರು: ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಣ ಮಾಡುತ್ತೇವೆ. ಲಾಕ್ ಡೌನ್ ಕುರಿತು ಗಾಳಿಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಗೃಹ ಸಚಿವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮಾಡಲ್ಲ. ಗಾಳಿ ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಿಯಮ ಪಾಲಿಸಿದರೇ ಕೊರೊನಾ ನಿಯಂತ್ರಿಸಬಹುದು. ಊಹಾಪೆÇೀಹಗಳಿಗೆ ಯಾರೂ ಕಿವಿಕೊಡಬೇಡಿ ಎಂದು ಗೃಹ ಸಚಿವರು ಹೇಳಿದರು.
ಲಾಕ್ ಡೌನ್: ಗಾಳಿಸುದ್ದಿ ಹರಡುವವರ ವಿರುದ್ಧ ಕ್ರಮ -ಗೃಹ ಸಚಿವ ಬಸವರಾಜ ಬೊಮ್ಮಾಯಿ

