ಬುಧವಾರ 14,738 ಮಂದಿಯಲ್ಲಿ ಕೊರೊನಾ ಪತ್ತೆ; 66 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಬುಧವಾರ 14,738 ಮಂದಿಗೆ ಕೊರೊನಾ ದೃಢಪಟ್ಟಿದೆ.
ಬೆಂಗಳೂರು ನಗರದಲ್ಲೇ 10,497 ಮಂದಿಯಲ್ಲಿ ಸೋಂಕು ಪತ್ತೆ ಆಗಿದೆ.
ಕಲಬುರಗಿ 624, ತುಮಕೂರು 387, ಬೀದರ್ 363, ಮೈಸೂರು 327, ಬಳ್ಳಾರಿ 200 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.
ಕೊರೊನಾದಿಂದ 66 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 30 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ. ಈ ಪೈಕಿ 9,99,958 ಮಂದಿ ಬಿಡುಗಡೆಯಾಗಿದ್ದು, 96,561 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 555 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.