ಯಡಿಯೂರಪ್ಪ ಅಳಿಯ ಹಾಗೂ ಮೊಮ್ಮಗಳಿಗೂ ಕೊರೊನಾ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರ ಅಳಿಯ ಹಾಗೂ ಮೊಮ್ಮಗಳಿಗೆ ಕೊರೊನಾ ಸೋಂಕು ತಗುಲಿದೆ. ಬಿ.ಎಸ್.ಯಡಿಯೂರಪ್ಪ ಅವರ ಹಿರಿಯ ಪುತ್ರಿ ಪದ್ಮಾವತಿ ಅವರ ಪುತ್ರಿ ಡಾ. ಸೌಂದರ್ಯ ಮತ್ತವರ ಪತಿ ಡಾ. ನಿರಂಜನ್ ಗೂ ಕೊರೊನಾ ಪಾಸಿಟಿವ್ ಆಗಿದೆ.
ಡಾ. ಸೌಂದರ್ಯ ಮತ್ತು ಡಾ. ನಿರಂಜನ್ ಸಹ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.