ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ನವದೆಹಲಿ: ಇದೇ ಮೇ. 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಮೂರನೇ ಹಂತದ ಲಸಿಕೆ ವಿತರಣೆಯಲ್ಲಿ ದೇಶದ ಎಲ್ಲಾ ವಯಸ್ಕರು ಕೂಡ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಮೋದಿ ತಿಳಿಸಿದ್ದಾರೆ.
ಭಾರತವೂ ದಾಖಲೆಯ ವೇಗದಲ್ಲಿ ಲಸಿಕೆ ನೀಡುತ್ತಿದೆ. ಇದನ್ನು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರೆಸಬೇಕು ಎಂದರು.
ರಾಜ್ಯ ಸರ್ಕಾರಗಳು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಪಡೆಯಬಹುದಕ್ಕೆ ಅವಕಾಶ ನೀಡಲಾಗಿದೆ. ಉತ್ಪಾದಕರು ಶೇ. 50ರಷ್ಟು ಲಸಿಕೆಯನ್ನು ಒಪನ್ ಮಾರುಕಟ್ಟೆಯಲ್ಲಿ ಬಾಟಲ್‍ಗಳನ್ನು ಮಾರಾಟ ಮಾಡಲು ಕೂಡ ಅನುಮತಿ ನೀಡಲಾಗುವುದು ಎಂದರು.