ಬೆಂಗಳೂರು: ಎರಡನೇ ಅಲೆ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಏ. 21ರಿಂದ ಮೇ 4ರ ವರೆಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ.
ರಾಜ್ಯದಲ್ಲಿ ವೀಕೆಂಡ್ ಲಾಕ್ ಡೌನ್‍ನೊಂದಿಗೆ ನೈಟ್ ಕಫ್ರ್ಯೂವನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್ ಲಾಕ್ ಡೌನ್ ಇರಲಿದೆ. ವೀಕೆಂಡ್ ಲಾಕ್ ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಹಣ್ಣು, ತರಕಾರಿ, ದಿನಸಿ ಖರೀದಿ ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಂಗಳವಾರ ಪ್ರಕಟಿಸಿದರು.
ರಾತ್ರಿ 10 ಗಂಟೆ ಬದಲಾಗಿ 9 ಗಂಟೆಗೆ ಕೊರೊನಾ ಕಫ್ರ್ಯೂ ಜಾರಿಗೊಳಿಸಲಾಗಿದೆ. ನೈಟ್ ಕಪ್ರ್ಯೂ ಬೆಳಗ್ಗೆ 6ರವರೆಗೂ ಮುಂದುವರಿಯಲಿದೆ.
ಸಿನಿಮಾ, ಶಾಲೆ, ಥಿಯೇಟರ್ ಬಂದ್, ಸಲೂನ್, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಪೂಜೆ ಅರ್ಚಕರಿಗೆ ಮಾತ್ರ ಸೀಮಿತ. ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಪಾರ್ಸಲ್‍ಗೆ ಮಾತ್ರ ಸೀಮಿತ. ಮಾಲ್ ಗಳು ಬಂದ್. ಲಿಕ್ಕರ್ ಶಾಪ್, ಬಾರ್‍ನಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ. ಕೈಗಾರಿಕೆ, ವ್ಯವಸಾಯ, ದಿನಸಿ ಮಳಿಗೆಗೆ ಅನುಮತಿ, ಅಂತರಾಜ್ಯ ಓಡಾಟಕ್ಕೆ ಅವಕಾಶ. ಸಾರಿಗೆ ಬಸ್‍ಗಳಲ್ಲಿ ಶೇ.50 ಮಾತ್ರ ಅವಕಾಶ. ಮದುವೆ ಸಮಾರಂಭದಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ. ಸರ್ಕಾರಿ ಕಚೇರಿ ಶೇ. 50 ರಷ್ಟು ಮಾತ್ರ ಅವಕಾಶ. ಐಟಿ ಬಿಟಿ ವರ್ಕ್ ಫ್ರಮ್ ಹೋಮ್. ಶವಸಂಸ್ಕಾರದಲ್ಲಿ 30 ಜನ ಪಾಲ್ಗೊಳ್ಳಬಹುದು. 144 ಸೆಕ್ಷನ್ ಇಡೀ ರಾಜ್ಯದಲ್ಲಿ ಜಾರಿ. ದೂರ ಪ್ರಯಾಣ ಮಾಡುವವರು ಟಿಕೆಟ್ ತೋರಿಸಿ ಸಂಚರಿಸಬೇಕು.
ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿತ್ತು. ಸಭೆ ನಂತರ ಹಲವು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಕೋವಿಡ್: ರಾಜ್ಯ ಸರ್ಕಾರದ ಹೊಸ ನಿಯಮಗಳು

