ರಾಜ್ಯಗಳಿಗೆ ನೀಡುವ ಲಸಿಕೆ ಬೆಲೆ ಕಡಿತಗೊಳಿಸಿದ ಸೆರಂ

ನವದೆಹಲಿ: ರಾಜ್ಯಗಳಿಗೆ ನೀಡುವ ತನ್ನ ಲಸಿಕೆಯ ಬೆಲೆಯನ್ನು ಸೆರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ) ಬುಧವಾರ ಕಡಿತಗೊಳಿಸಿದೆ.
ದೇಶದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಕೋವಿಡ್ -19 ಲಸಿಕೆ ತಯಾರಕ ಸೆರಂ ಇನ್‍ಸ್ಟಿಟ್ಯೂಟ್ ಈ ಹಿಂದೆ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 400 ಬೆಲೆ ನಿಗದಿಪಡಿಸಿತ್ತು.
ಇದಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಹಾಗೂ ಕೇಂದ್ರ ಸರ್ಕಾರ ಸಹ ಬೆಲೆ ಕಡಿತಗೊಳಿಸುವಂತೆ ಮನವಿ ಮಾಡಿದ್ದರಿಂದ ಈಗ ರಾಜ್ಯಗಳಿಗೆ ಪ್ರತಿ ಡೋಸ್‍ಗೆ 300 ರೂ.ಗೆ ಮಾರಾಟ ಮಾಡಲು ಸೆರಂ ತೀರ್ಮಾನಿಸಿದೆ.
ಈ ಕುರಿತು ಎಸ್‍ಐಐ ಸಿಇಒ ಆಧಾರ್ ಪೂನಾವಾಲ ಅವರು ಬುಧವಾರ ಟ್ವೀಟ್ ಮಾಡಿ, ಸೆರಂ ಇಂಡಿಯಾ ರಾಜ್ಯಗಳಿಗೆ ನೀಡುವ ಲಸಿಕೆಯ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 400 ರಿಂದ 300 ರೂ.ಗೆ ಇಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.