ಇಂದು ಕಾರ್ಮಿಕರ ದಿನಾಚರಣೆ: ಶೋಷಣೆಯಲ್ಲೇ ಬದುಕು ಸಾಗಿಸುತ್ತಿರುವ ಕಾರ್ಮಿಕರು

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

ಪ್ರತಿಯೊಂದು ದೇಶ ರಾಜ್ಯದ ಅಭಿವೃದ್ಧಿಯು ಆ ದೇಶ- ರಾಜ್ಯಗಳ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷ ಕಾರ್ಮಿಕರ ವರ್ಗದಿಂದ ದೇಶದ ಆರ್ಥಿಕ ಪ್ರಗತಿಯನ್ನು ಕಾಣಲು ಸಾಧ್ಯ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಾಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.
ಈ ರೀತಿ ಆದಾಯ ಗಳಿಸುವ ವರ್ಗಕ್ಕೆ ಕಾರ್ಮಿಕ ವರ್ಗವೆಂದು ಕರೆಯುತ್ತಿದ್ದು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಶೇ 60ರಷ್ಟು ಕಾರ್ಮಿಕ ವರ್ಗದವರು ಕಂಡು ಬರುತ್ತಾರೆ.
ಕೈಗಾರಿಕಾ ಕ್ರಾಂತಿಯ ನಂತರ ಅದರ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು. ಒಂದು ಬಂಡವಾಳಶಾಹಿ ವರ್ಗ ಹಾಗೂ ಇನ್ನೊಂದು ಕಾರ್ಮಿಕ ವರ್ಗ. ಅಂದಿನಿಂದ ಇಂದಿನವರೆಗೂ ಕಾರ್ಮಿಕರ ಮೇಲಿನ ಶೋಷಣೆ ಹಾಗೆ ನಡೆಯುತ್ತಲೇ ಬಂದಿದೆ.
ಕಾರ್ಮಿಕ ದಿನ ಆಚರಣೆ ಹಿನ್ನಲೆ: ಸುಮಾರು 150 ವರ್ಷ ಗಳ ಹಿಂದೆ ಯುರೋಪ್, ಅಮೇರಿಕಾ ಮುಂತಾದ ರಾಷ್ಟ್ರಗಳಲ್ಲಿ ಕಾರ್ಮಿಕರನ್ನು ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿ ತನಕ ದುಡಿಸಿ ಕೊಳ್ಳುತ್ತಿದ್ದರು.
ಇದನ್ನು ವಿರೋಧಿಸಿದ ಕಾರ್ಮಿಕರು ದಿನದ 8 ಗಂಟೆ ದುಡಿವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ಲೆಕ್ಕಾಚಾರ ಮುಂದಿಡಲಾಯಿತು.
8 ಗಂಟೆ ದುಡಿವ ಅವಧಿ ಎಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕುವದಕ್ಕಾಗಿ ಮೇ 4ರಂದು ಪೆÇೀಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.
ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು. ಇದನ್ನು ಲೆಕ್ಕಿಸದೇ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆ ತಂದರು. ಇದರ ಸವಿ ನೆನಪಿಗೆ ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಅಂತರರಾಷ್ಟೀಯ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.
ಭಾರತದಲ್ಲಿ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಭಾರತೀಯ ಕಾರ್ಮಿಕರುಮೊಟ್ಟಮೊದಲನೇಯದಾಗಿ ಕಾರ್ಮಿಕ ದಿನಾಚರಣೆ ಯಲ್ಲಿ ಭಾಗವಹಿಸಿದ್ದು ಇಂಗ್ಲೆಂಡಿನಲ್ಲಿ ಅದು ಭಾರತೀಯ ನಾವಿಕರು. 1925 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪೆÇೀಸ್ಟರ್ ಗಳನ್ನು ಹಿಡಿದು ಲಂಡನ್ ನ ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ನಂತರ 1927ರಲ್ಲಿ ಮುಂಬಯಿಯಲ್ಲಿ ನಡೆದ ಕಾರ್ಮಿಕ ದಿನ ಆಚರಣೆಯಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿ ಆರಂಭಿಸಿದರು. 1927ರಿಂದ ಪ್ರತಿವರ್ಷವೂ ದೇಶದಲ್ಲಿ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.
ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೆÇೀಲೀಸರು ಅನೇಕ ನಿಬರ್ಂಧಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು.
ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.
ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡು ಬಂದಿದ್ದು ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದರೆ.
ಇನ್ನೂಳಿದ ಶೇ 85 ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೋಟೆಲ್‍ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು, ಈ ಮುಂತಾದ ಕ್ಷೇತ್ರಗಳಲ್ಲಿ ದುಡಿವ ಕೆಲಸಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಇರುವುದಿಲ್ಲ, ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಹಲ್ಲಿಲ್ಲದ ಕಾಯ್ದೆಯಾಗಿದ್ದು ಪರಿಪೂರ್ಣವಾಗಿ ಜಾರಿಯಲ್ಲಿ ತರಲು ಸಾಧ್ಯವಾಗಿಲ್ಲ.
ಕಳೆದ ವರ್ಷದಿಂದ ದೇಶದಲ್ಲಿ ಕೋವಿಡ್ ಯಿಂದಾಗಿ ಸು 20 ಕೋಟಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಗೆ ತಲುಪಿತು, ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬಂದಂತಹವರು ಲಾಕ್ ಡೌನ್ ಯಿಂದ ತಮ್ಮ ಹಳ್ಳಗಳಿಗೆ ಹಿಂದಿರುಗಿದರು, ಇದರಿಂದಾಗಿ ಅರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿಹಾಕಿತು, ಅನೇಕ ಸಣ್ಣ ಮತ್ತು ಮಾದ್ಯಮ ವರ್ಗ ಕೈಗಾರಿಕೆಗಳು ಮಚ್ಚಿದವು ಸರ್ಕಾರ ಅನೇಕ ಯೋಜನೆಗಳನ್ನು, ಸಹಾಯಧನವನ್ನು ನೀಡಿದರು ಅದು ಅವರ ಬದುಕಿಗೆ ಕೊಂಚಮಟ್ಟಿಗೆ ನೆಮ್ಮದಿ ತಂದರು ಮುಂದೇನು ಎಂಬ ಪ್ರಶ್ನೆ ಹಾಗೆ ಉಳಿಯಿತು, ಕೋವಿಡ್ ಕಡಿಮೆ ಆಯಿತು ,ಮತ್ತೆ ಆರ್ಥಿಕ ವ್ಯವಸ್ಥೆ ಸಹಜ ಸ್ಥಿತಿಯತ್ತ ಮರಳುತಿದೆ ಎನ್ನುವಷ್ಟರಲ್ಲಿಯೇ 2ನೇ ಅಲೆ ಪ್ರಾರಂಭವಾಯಿತು, ಮತ್ತೆ ಕಾರ್ಮಿಕರ ಬದುಕು ಅತಂತ್ರೆಗೆ ಸಿಲುಕಿದೆ, ಇಡೀ ದೇಶಾದ್ಯಂತ ನಗರ ಹಳ್ಳಿ ಎನ್ನದೇ ಕೊರೊನಾ ವಕ್ಕರಿಸಿ ಸಾವುನೋವುಗಳು ಸಂಭವಿಸುತ್ತಿದೆ,
ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು ಶ್ರಿಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಬಂಡವಾಳಶಾಹಿ
ಶೋಷಣೆಯ ವಿರುದ್ದ ಕಾರ್ಮಿಕರಿಗೆ ಬಲ ತುಂಬ ಬೇಕಿದೆ ಅದು ಕಾನೂನುಗಳ ಮೂಲಕ, ಅವರ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡ ಬೇಕಿರುವುದು ನಮ್ಮಲ್ಲರ ಕರ್ತವ್ಯ.