ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

ಮಸ್ಕಿ: ತೀವ್ರ ಕುತೂಹಲ ಮೂಡಿಸಿರುವ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಗೆ ಈ ಮೂಲಕ ಮುಖಭಂಗವಾಗಿದೆ.
ಕಾಂಗ್ರಸ್ ಅಭ್ಯರ್ಥಿ ಆರ್. ಬಸವನಗೌಡ ತುರುವಿನಹಾಳ 30641 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಇವರು ಒಟ್ಟು 86222 ಮತ ಪಡೆದಿದ್ದಾರೆ.
ಪ್ರತಾಪ್ ಗೌಡ ಪಾಟೀಲ್ 55,581 ಮತ ಪಡೆದು ಸೋಲುಂಡಿದ್ದಾರೆ.