ಬೆಳಗಾವಿ ಲೋಕಸಭೆ ಉಪಚುನಾವಣೆ: ಬಿಜೆಪಿ ಮಂಗಳಾ ಅಂಗಡಿ ಜಯ

ಬೆಳಗಾವಿ: ಬಿಜೆಪಿಯ ಮಂಗಳಾ ಅಂಗಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಂಗಳಾ ಅಂಗಡಿ ಅವರು 4,35,202 ಮತಗಳನ್ನು ಗಳಿಸಿ ಜಯಶಾಲಿ ಆದರೆ ಸತೀಶ್ ಜಾರಕಿಹೊಳಿ ಅವರು 4,32,299 ಮತಗಳನ್ನು ಪಡೆದು ಸೋಲುಂಡಿದಿದ್ದಾರೆ.
ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಅವರು ಕೊನೆಯ 7 ಸುತ್ತುಗಳ ಮತ ಎಣಿಕೆ ವರೆಗೂ ಮುನ್ನಡೆ ಸಾಧಿಸಿದ್ದರು. ಆದರೆ ನಂತರ ಮಂಗಳಾ ಅಂಗಡಿ ಅವರು ಮುನ್ನಡೆ ಸಾಧಿಸುವ ಮೂಲಕ ವಿಜಯಿಯಾದರು.