ಬೆಡ್ ಬ್ಲಾಕಿಂಗ್ ದಂಧೆ: ವೈದ್ಯರಿಬ್ಬರು ಸೇರಿ 8 ಮಂದಿ ಸಿಸಿಬಿ ವಶಕ್ಕೆ

ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಇಬ್ಬರು ಡಾಕ್ಟರ್ ಗಳು ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಈಗಾಗಲೇ ಪೊಲೀಸರು ನೇತ್ರಾವತಿ ಮತ್ತು ರೋಹಿತ್ ಎಂಬುವರನ್ನು ಬಂಧಿಸಿದ್ದಾರೆ.
ಇವರ ಬಂಧನದ ಬೆನ್ನಲ್ಲೇ ಇಬ್ಬರು ಬಿಬಿಎಂಪಿ ಡಾಕ್ಟರ್‍ಗಳು, ಡೇಟಾ ಎಂಟ್ರಿ ಆಪರೇಟರ್‍ಗಳು ಮತ್ತು ಅಸಿಸ್ಟೆಂಟ್‍ಗಳು ಸೇರಿ ಒಟ್ಟು 8 ಮಂದಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.