ರೈಲಿನ ಮೂಲಕ ಬೆಂಗಳೂರಿಗೆ ಆಮ್ಲಜನಕ ರವಾನೆ

ಬೆಂಗಳೂರು: ಕೇಂದ್ರ ಸರ್ಕಾರ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ರೈಲಿನ ಮೂಲಕ ಬೆಂಗಳೂರಿಗೆ ರವಾನಿಸಿದೆ.
6 ಕಂಟೇನರ್ ಗಳಲ್ಲಿ 120 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತು ರೈಲು ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದೆ.
ಜಮ್ ಶೆಡ್ ಪುರದಿಂದ ಬೆಂಗಳೂರಿಗೆ ಎಕ್ಸ್‍ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‍ಗಳನ್ನು ತರಲಾಗಿದೆ.
ತಲಾ 20 ಟನ್ ತೂಕ ಇರುವ ಆಕ್ಸಿಜನ್ ಕಂಟೇನರ್‍ಗಳು ಈಗ ವೈಟ್‍ಫೀಲ್ಡ್‍ನಲ್ಲಿರುವ ಕಾಪೆರ್Çರೇಷನ್ ಆಫ್ ಇಂಡಿಯಾ ಡಿಪೆÇೀಗೆ ಆಗಮಿಸಿವೆ.
ಜಮ್ ಶೆಡ್ ಪುರದಿಂದ ನಿನ್ನೆ ಮುಂಜಾನೆ 3ಕ್ಕೆ ಹೊರಟಿದ್ದ ಆಕ್ಸಿಜನ್ ಎಕ್ಸ್‍ಪ್ರೆಸ್ ರೈಲು 30 ಗಂಟೆಗಳ ನಂತರ ಬೆಂಗಳೂರು ತಲುಪಿದೆ. ಆಕ್ಸಿಜನ್ ಹೊತ್ತ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.