ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಎಂಬ ಅನಾಹುತ ಸೋಂಕು

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಕಳೆದ ವರ್ಷದಿಂದ ಇಲ್ಲಿಯವರೆಗೆ ಭಾರತವು ಸೇರಿದಂತೆ ಹಲವಾರು ರಾಷ್ಟ್ರಗಳು ಕೊರೊನಾದಿಂದಾಗಿ ಸಾವುನೋವುಗಳು ನೋಡಿದವು. ಅತ್ಯಂತ ಅಪಾಯಕಾರಿ ಕೊರೊನಾ 2ನೇ ಆಲೆಯಿಂದ ಭಾರತದಲ್ಲಿ ಸೋಂಕಿತರ ಪ್ರಮಾಣದಲ್ಲಿ ಮತ್ತು ಸಾವು ಸಂಭವಿಸುವುದರಲ್ಲಿ ಹೆಚ್ಚಳವಾಯಿತು. ಈಗಾಗಲೇ ಜನರು ತಮ್ಮ ಕುಟುಂಬದವರನ್ನು, ಆತ್ಮೀಯರನ್ನು ಕಳೆದುಕೊಂಡು ದುಃಖದಲ್ಲಿ ನೋವಿನಲ್ಲಿ ಇರುವ ಸಂದರ್ಭದಲ್ಲಿ ಮತ್ತೊಂದು ಬ್ಲಾಕ್ ಫಂಗಸ್ ಎಂಬ ಅನಾಹುತಕಾರಿ ರೋಗ ಅಪ್ಪಳಿಸಿರುವುದು ಜನರಲ್ಲಿ ಆತಂಕ ಮೂಡಿಸುತ್ತದೆ.
ಕೊರೊನಾ ಸೋಂಕಿನ ಆತಂಕ ಒಂದೆಡೆಯಾದ್ರೆ ಸೋಂಕಿನಿಂದ ಗುಣಮುಖರಾದವ್ರಲ್ಲಿ ಕಂಡುಬರ್ತಿರೋ ಬ್ಲ್ಯಾಕ್ ಫಂಗಸ್‍ನ ಆತಂಕ ಮತ್ತೊಂದೆಡೆಯಾಗಿದೆ. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಈ ಕಾಯಿಲೆಗೆ ಒಳಪಡುವವರ ಸಂಖ್ಯೆ ಹೆಚ್ಚಾಗಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಸಾವು ಸಂಭವಿಸುತ್ತಿರುವುದು ಕಂಡು ಬಂದಿದೆ.
ಹಾಗಾದರೆ ಏನು ಇದು ಬ್ಲಾಕ್ ಫಂಗಸ್ (ಕಪ್ಪು ಶಿಲೀಂದ್ರ) ಅಂದರೆ ಕೋವಿಡ್-19ನಿಂದ ಚೇತರಿಸಿಕೊಂಡವರಲ್ಲಿ ಮೆದುಳು, ಮುಖದ ನೋವು, ಮರಗಟ್ಟುವಿಕೆ ಅಥವಾ ಊತ, ಮೂಗಿನ ಮೇಲೆ ಕಪ್ಪು ಬಣ್ಣ, ಹಲ್ಲು, ದವಡೆಗಳನ್ನು ಸಡಿಲಗೊಳಿಸುವುದು, ನೋವು, ಜ್ವರ, ಚರ್ಮದ ಗಾಯ, ಥ್ರಂಬೋಸಿಸ್ ಮತ್ತು ನೆಕ್ರೋಸಿಸ್ (ಎಸ್ಚಾರ್), ಎದೆ ನೋವು, ಪ್ಲೆರಲ್ ಎಫ್ಯೂಷನ್, ಹಿಮೋಪ್ಟಿಸಿಸ್ ಮತ್ತು ಉಸಿರಾಟದ ತೊಂದರೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಇದನ್ನು ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕು ಎಂದು ಕರೆಯಲಾಗುತ್ತದೆ. ಈ ಸೋಂಕು ಅಪಾಯಕಾರಿಯಾಗಿದ್ದು, ಅಲ್ಲದೇ ಕಣ್ಣುಗಳ ಮೇಲೆ ಪರಿಣಾಮ ಬೀರಿ ದೃಷ್ಟಿಹೀತನೆ ಅಥವಾ ಪ್ರಾಣಕ್ಕೇ ಕುತ್ತಾಗುವ ಅಪಾಯ ಉಂಟುಮಾಡುತ್ತಿದೆ.
ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಕೋವಿಡ್‍ನಿಂದ ಚೇತರಿಸಿಕೊಂಡ ಒಂದು ತಿಂಗಳ ಒಳಗಡೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಕಣ್ಣು, ಕಿವಿ ಮತ್ತು ಮಿದುಳಿಗೆ ವ್ಯಾಪಿಸಿಕೊಂಡು, ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.
ಈ ಸೋಂಕು ಪ್ರಮುಖವಾಗಿ ಚಿಕಿತ್ಸೆಯಲ್ಲಿರುವ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈ ಶಿಲೀಂದ್ರ ಸೋಂಕು ಹೆಚ್ಚಾಗಿ ಕೋವಿಡ್ ಸೋಂಕಿತರಲ್ಲಿ, ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.
ವೈದ್ಯರು ಹೇಳುವ ಹಾಗೆ ‘ಕೋವಿಡ್ ಕಾಣಿಸಿಕೊಳ್ಳುವ ಪೂರ್ವದಲ್ಲಿ ಇದು ಅμÁ್ಟಗಿ ಗಮನಕ್ಕೆ ಬರುತ್ತಿರಲಿಲ್ಲ. ಗಂಭೀರವಾಗಿ ಅಸ್ವಸ್ಥಗೊಂಡ ಕೊರೊನಾ ಸೋಂಕಿತರಿಗೆ ಸ್ಟೆರಾಯ್ಡ್ ಬಳಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶ ಹೆಚ್ಚಳವಾಗುತ್ತದೆ. ಅದೇ ರೀತಿ, ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಬೇಗ ಪತ್ತೆ ಮಾಡದಿದ್ದಲ್ಲಿ ವ್ಯಕ್ತಿಯು ದೃಷ್ಟಿ ಕಳೆದುಕೊಳ್ಳುತ್ತಾನೆ. ಚಿಕಿತ್ಸೆ ನೀಡುವುದು ವಿಳಂಬವಾದಲ್ಲಿ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡು, ವ್ಯಕ್ತಿ ಮೃತಪಡುವ ಸಾಧ್ಯತೆ ಇರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಶಿಲೀಂದ್ರ ಸೋಂಕು ಹೆಚ್ಚಳಕ್ಕೆ ಸ್ಟಿರಾಯ್ಡ್‍ಗಳ ಬಳಕೆ ಕಾರಣ ಎಂದು ಹೇಳುವ ವೈದ್ಯರು ಪ್ರಮುಖವಾಗಿ ಮಧುಮೇಹಿಗಳಲ್ಲಿ ಇದು ಹೆಚ್ಚಿನ ಪರಿಣಾಮ ಬೀರುತ್ತದೆ.
ಹೀಗಾಗಿ ಹೆಚ್ಚಿನ ನಿಗಾ ಅತ್ಯಗತ್ಯ. ಬೆಂಗಳೂರಿನ ಜಯನಗರದ ಅಪೆÇಲೊ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಇಂತಹ ಸುಮಾರು 10 ಕಪ್ಪು ಶಿಲೀಂದ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಮೈಸೂರು, ಮಣಿಪಾಲ್, ಆಸ್ಟರ್ ಮತ್ತು ಇತರೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಪ್ರಕರಣಗಳು ಕಂಡುಬಂದಿವೆ.
ಮೊದಲ ಅಲೆ ವೇಳೆ ಈ ಸೋಂಕು ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ಪ್ರಮುಖವಾಗಿ ವಯಸ್ಸಾದವರಲ್ಲಿ ಕಂಡುಬಂದಿತ್ತು. ಆದರೆ ಈಗ 2ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಯಲ್ಲಿರುವಾಗಲೇ ಕಂಡುಬರುತ್ತಿದೆ. ಇಂತಹ ಬೆಳವಣಿಗೆಗೆ ಸ್ಟಿರಾಯ್ಡ್ ಗಳ ಹೆಚ್ಚಿನ ಬಳಕೆ ಕಾರಣ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕು ಪತ್ತೆ ಹಚ್ಚುವುದು ಹೇಗೆ..?: ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಸ್ಟೀರಾಯ್ಡ್ ತೆಗೆದುಕೊಂಡ ರೋಗಿಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಎರಡನೇ ವಾರದ ನಂತರ ಈ ಕಪ್ಪು ಶಿಲೀಂದ್ರ ಸೋಂಕು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸೋಂಕು ಇರುವ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡ ಅತ್ಯಂತ ಹೆಚ್ಚಾಗಿರುತ್ತದೆ. ಅಂತೆಯೇ ಮೂಗಿನಲ್ಲಿ ಕಪ್ಪು ದ್ರವ ವಿಸರ್ಜನೆಯಾಗುತ್ತಿರುತ್ತದೆ. ಸಿಟಿ ಮತ್ತು ಎಂಆರ್ ಐ ಸ್ಕ್ಯಾನ್ ಮೂಲಕವೂ ಈ ಶಿಲೀಂಧ್ರಗಳ ಸೋಂಕನ್ನು ಪತ್ತೆ ಮಾಡಬಹುದು. ಮೂಗಿನ ಬಯಾಪ್ಸಿ ಮೂಲಕ ಈ ಸೋಂಕು ಇರುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು.
ಕಫ ಪರೀಕ್ಷೆಯ ಮೂಲಕ ರೋಗನಿರ್ಣಯ ಮಾಡಬಹುದು ಮತ್ತು ಆರಂಭಿಕ ಹಂತದಲ್ಲಿ ಬಂದರೆ ರೋಗಿಗಳು ಬೇಗ ಚೇತರಿಸಿಕೊಳ್ಳಬಹುದು ಎಂದು ಅಪೆÇಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಮುಖ್ಯಸ್ಥ ಡಾ.ರವೀಂದ್ರ ಮೆಹ್ತಾ ಹೇಳಿದ್ದಾರೆ.
ಮಹಾರಾಷ್ಟ್ರ, ಗುಜರಾತ್ ಕರ್ನಾಟಕ ಗಳಲ್ಲಿ ಈ ರೀತಿಯ ನೂರಾರು ಪ್ರಕರಣಗಳು ವರದಿಯಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮ್ಯೂಕೋರ್ಮೈಕೋಸಿಸ್ ಫಂಗಲ್ ಸೋಂಕು ದೃಷ್ಟಿ ಹೀನತೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿದ್ದು, ಇದನ್ನು ನಿವಾರಿಸುವ ಚಿಕಿತ್ಸೆಯೂ ದುಬಾರಿಯಾಗಿರುವುದು ಮತ್ತೊಂದು ಆತಂಕದ ಅಂಶ ಎನ್ನುತ್ತಾರೆ ವೈದ್ಯರು
ಚಿಕಿತ್ಸೆಯ ಖರ್ಚು ದುಬಾರಿಯಾಗಿದೆ: ಇದಕ್ಕೆ ಆ್ಯಂಫೆÇಸೆರಟಿನ್ ಬಿ ಅನ್ನೋ ಚುಚ್ಚುಮದ್ದು ಬಳಸಲಾಗುತ್ತದೆ. ಪ್ರತಿದಿನಕ್ಕೆ ಏನಿಲ್ಲ ಅಂದ್ರೂ 35 ರಿಂದ 54 ಸಾವಿರ ಒಂದೇ ಚುಚ್ಚುಮದ್ದಿನ ಖರ್ಚು ಬರುತ್ತೆ. 10 ರಿಂದ 14 ದಿವಸ ಇದನ್ನ ಕೊಡಬೇಕಾಗುತ್ತೆ. ಒಬ್ಬ ರೋಗಿಗೆ ಈ ಚುಚ್ಚುಮದ್ದಿಗೆ 5 ರಿಂದ 7 ಲಕ್ಷ ಖರ್ಚು ತಗುಲುತ್ತೆ. ಆಗಲೇ ಲಕ್ಷಾಂತರ ರೂಪಾಯಿಯನ್ನ ಕೋವಿಡ್ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಈಗ ಮತ್ತೆ ಈ ಸೋಂಕು ತಗುಲಿವರು ಚಿಕಿತ್ಸೆ ತೆಗೆದು ಕೊಳ್ಳಲು ಹಣ ಇಲ್ಲದ ಸ್ಥಿತಿಯಲ್ಲಿದ್ದಾರೆ.
ಸರ್ಕಾರವು ಈ ಔಷಧಿಯ ಮೇಲೆ ಇರುವ ತೆರಿಗೆ ಮತ್ತು ಬೆಲೆಯನ್ನ ಕಡಿಮೆ ಮಾಡಬೇಕಿದೆ. ವಿಜ್ಞಾನಿಗಳು ಕೊರೊನಾ ಎದುರಿಸಲು ಕಂಡುಹಿಡಿದಂತೆ ಪರ್ಯಾಯವಾಗಿ ಲಸಿಕೆಯಾಗಲಿ ಔಷಧಯಾಗಲಿ ಕಂಡುಹಿಡಿದು ಇದಕ್ಕೂ ಬೇಗ ಪರಿಹಾರ ಒದಗಿಸುತ್ತಾರೆ ಎಂಬ ಭರವಸೆ ಎಲ್ಲರಿಗೂ ಇದೆ.
ಇಂತಹ ಸೋಂಕುಗಳಿಂದ ಕಾಪಾಡಿಕೊಳ್ಳಲು ಅದರೂ ನಾವುಗಳೆಲ್ಲ ಮನೆಯಲ್ಲಿ ಇರುವುದು ಅತ್ಯಗತ್ಯವಾಗಿದೆ.