ಬೆಂಗಳೂರು: ತೌಕ್ತೆ ಚಂಡಮಾರುತಕ್ಕೆ ಸಿಕ್ಕಿ ಅರಬ್ಬಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 9 ಮಂದಿ ಟಗ್ ಬೋಟ್ ಕಾರ್ಮಿಕರನ್ನು ರಕ್ಷಿಸುವಲ್ಲಿ ನೌಕಾ ಪಡೆ ಹಾಗೂ ಕರಾವಳಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.
ಸೋಮವಾರ ಬೆಳಗ್ಗೆಯಿಂದಲೂ ನಿರಂತರವಾಗಿ ಸಮುದ್ರದಲ್ಲಿ ಜಂಟಿ ಕಾರ್ಯಾಚರನೆ ನಡೆದಿತ್ತು.
ಈ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆ ಐವರನ್ನು ಹಾಗೂ ನೌಕಾಪಡೆ ನಾಲ್ವರನ್ನು ರಕ್ಷಿಸಿದೆ.
ಇವೆರೆಲ್ಲರನ್ನೂ ಮುಲ್ಕಿ ತೀರಕ್ಕೆ ಕರೆಯೊಯ್ದು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.
ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

