ನವದೆಹಲಿ: ಫೀಲ್ಡ್ ಕಮಾಂಡರ್ ಗಳಂತೆ ಕಾರ್ಯ ರ್ನಿಹಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು.
ಕೊರೊನಾ ನಿರ್ವಹಣೆ ಕುರಿತು ಮಂಗಳವಾರ ಪ್ರಧಾನಿ ಮೋದಿ, 10 ರಾಜ್ಯಗಳ 46 ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು.
ಫೀಲ್ಡ್ ಕಮಾಂಡರ್ ನಂತೆ ಇಡೀ ಜಿಲ್ಲೆಯನ್ನು ಸಶಸಕ್ತೀರಣ ಮಾಡಿ. ಕಾಳಸಂತೆಯಲ್ಲಿ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡಿಸಿಗಳಿಗೆ ಸಲಹೆ ನೀಡಿದರು.
ನಮ್ಮ ಅಸ್ತ್ರ ಲೋಕಲ್ ಕಂಟೇನ್ಮೆಂಟ್ ಜೋನ್ ಎಂದು ಪ್ರಧಾನಿಗಳು ತಿಳಿಸಿದರು.
ಎಲ್ಲಾ ಡಿಸಿಗಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಿಮ್ಮ ಎಲ್ಲಾ ಪ್ರಯತ್ನ ಶ್ಲಾಘಿಸುತ್ತೇನೆ. ನಿಮ್ಮ ಜಿಲ್ಲೆಯ ಸವಾಲುಗಳನ್ನು ಅರ್ಥ ಮಾಡಿಕೊಂಡು, ನಿಮ್ಮ ಜಿಲ್ಲೆ ಕೊರೊನಾದಿಂದ ಗೆದ್ದರೆ ದೇಶ ಗೆದ್ದಂತೆ ಎಂದು ಹೇಳಿದರು.
ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಕ್ ಡೌನ್ ಇಲ್ಲ. ಇದು ಗ್ರಾಮಗಳ ಶಕ್ತಿಯಾಗಿದೆ ಎಂದರು.
ಪಿಎಂ ಕೇರ್ಸ್ ಫಂಡ್ ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗುವುದು ಎಂದು ಮೋದಿ ತಿಳಿಸಿದರು.
ಲಸಿಕೆ ನೀಡಿಕೆಗೆ 15 ದಿನಗಳ ಮುಂಚಿತವಾಗಿ ತಿಳಿಸಿ. ಎಂದು ಪ್ರಧಾನಿ ಮೋದಿ ತಿಳಿಸಿದರು.
ಕೊರೊನಾ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಪಕ್ಷ ಬೇಧ ಮರೆತು ಕೊರೊನಾ ವಿರುದ್ಧ ಎಲ್ಲರೂ ಒಂದಾಗಿ ಎಂದು ಮೋದಿ ತಿಳಿಸಿದರು.
ಫೀಲ್ಡ್ ಕಮಾಂಡರ್ ಗಳಂತೆ ಕಾರ್ಯ ರ್ನಿಹಿಸಲು ಜಿಲ್ಲಾಧಿಕಾರಿಗಳಿಗೆ ಮೋದಿ ಕರೆ

