ಕರೋನಾ ಮುಕ್ತ, ಲಸಿಕೆ ಯುಕ್ತ, ರೋಗ ಮುಕ್ತ

ಮೈಸೂರು: ಬಿಜೆಪಿ ಮೈಸೂರು ನಗರ ಒಬಿಸಿ ಮೋರ್ಚಾ ವತಿಯಿಂದ ನರೇಂದ್ರ ಮೋದಿಯವರ ಆಡಳಿತಕ್ಕೆ ಗಿಡ ನೆಡುವ ಮೂಲಕ ಯಶಸ್ಸು ಕೊರಲಾಯಿತು.
ನಗರ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕೊರೊನಾ ವಿರುದ್ಧ ಹಾಗೂ ದೇಶದ ಪ್ರಗತಿಯತ್ತ ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸುವ ನಿಟ್ಟಿನಲ್ಲಿ ಭಾನುವಾರ ಹೊಂಗೆ, ಬೇವು, ಹಲಸು ಮರದ ಗಿಡ ನೆಡುವ ಮೂಲಕ ಆಚರಿಸಲಾಯಿತು.
ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಗೌಡ ರವರು ಈ ಸಂದರ್ಭದಲ್ಲಿ ಮಾತನಾಡಿ, ಮೋದಿಯವರ 7 ವರ್ಷದ ಆಡಳಿತ ಜನಸಾಮಾನ್ಯರಿಗೆ ತೃಪ್ತಿ ತಂದಿದೆ. ಆ ನಿಟ್ಟಿನಲ್ಲಿ ಮೈಸೂರು ನಗರವನ್ನು ಹಸಿರುಕರಣ ಮಾಡುವ ನಿಟ್ಟಿನಲ್ಲಿ ಇಂದು ಗಿಡ ನಡುವ ಮುಲಕ ಚಾಲನೆ ನೀಡಲಾಗಿದೆ ಎಂದರು.
ನಂತರ ನಗರ ಹಿಂದುಳಿದ ವರ್ಗಗಳ ಮೊರ್ಚಾ ನಗರ ಅಧ್ಯಕ್ಷ ಜೊಗಿ ಮುಂಜು ಮಾತನಾಡಿ ನರೇಂದ್ರ ಮೋದಿಯವರ ಸರ್ಕಾರದ ಆಡಳಿತ ಮತ್ತು ಇಂದಿಗೆ ಪ್ರಮಾಣ ವಚನ ಸ್ವೀಕರಿಸಿ 7 ವರ್ಷ ಮುಗಿದಿದ್ದು ಅಂತರಾಷ್ಟ್ರೀಯ ಬಯೋ ಕೆಮಿಕಲ್ ವಾರ್ ನಿಂದ ರಾಷ್ಟ್ರದಲ್ಲಿ ಕೊರೊನಾ ಮನಕುಲವನ್ನೆ ತಲ್ಲಣಗೊಳಿಸಿದೆ ಇಂತಹ ಸಂಧರ್ಭದಲ್ಲಿ ನಮ್ಮಂತಹ ಯುವ ಜನತೆ ಕೊರೊನಾ ಮುಕ್ತ, ಲಸಿಕೆ ಯುಕ್ತ, ರೋಗ ಮುಕ್ತ ಎಂಬ ಕಲ್ಪನೆಯಿಂದ ಎಲ್ಲಾ ಯುವಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಅದನ್ನು ಪೆÇೀಷಿಸುವ ಮೂಲಕ ಉತ್ತಮವಾದ ಗಾಳಿಯನ್ನು ಸಮಾಜಕ್ಕೆ ಅರ್ಪಣೆ ಮಾಡಿದರೆ ಮುಂದಿನ ಯುವ ಪೀಳಿಗೆಯು ಆರೋಗ್ಯ ದಾಯಕವಾಗಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಗೋಕುಲ್ ಗೋವರ್ಧನ, ಪರಮೇಶ ಗೌಡ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಕಾರ್ಯದರ್ಶಿ ಹರೀಶ್ ಅಂಕಿತ, ಗಣೇಶ್ ಲಾಳಗಿ, ಸೋಶಿಯಲ್ ಮೀಡಿಯಾ ಸಂಚಾಲಕ ಅಭಿಲಾಶ್ ಕೊಟಾಯ್ ಇದ್ದರು.