ಮೈಸೂರು: ಕೊರೊನಾ ವಾರಿಯರ್ಸ್ ಪೌರಕಾರ್ಮಿಕರ ಶ್ರಮ ಸಾರ್ಥಕ ಸೇವೆ ಅಪಾರವಾದುದು ಎಂದು ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ ಹೇಳಿದರು.
ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಹಾಗೂ ವಾಣಿಜ್ಯ ಪ್ರಕೋಷ್ಠ ವತಿಯಿಂದ ನಗರದ ಚಾಮುಂಡಿಪುರಂ ವೃತ್ತ ದಲ್ಲಿ ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ ಎರಡನೇ ಅವಧಿಯ 2ವರ್ಷ ಪೂರೈಸಿದ ಕೇಂದ್ರ ಸರ್ಕಾರ ಸ್ವಾಗತಿಸಿ ಜತೆಗೆ ಬಿಜೆಪಿ ರಾಜ್ಯದ ಆದೇಶದ ಮೇರೆಗೆ ಸೇವೆಯೇ ಸಂಘಟನೆ ಎಂಬ ಕಾರ್ಯಕ್ರಮವನ್ನು ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ಭಾನುವಾರ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ರವರು ಪ್ರಮಾಣವಚನ ಸ್ವೀಕರಿಸಿ ಇಂದಿಗೆ 7ವರ್ಷ ಸಂದಿದೆ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಜೀ ರವರ ಸಂದೇಶವೆಂದರೆ ದೇಶದ ರಕ್ಷಣೆ ಮಾಡುವ ವರ್ಗಕ್ಕೆ ದೇಶಾಭಿಮಾನದ ನಾಗರೀಕರು ಸಮಾಜದಲ್ಲಿ ಹೆಚ್ಚು ಗೌರವ ಸಲ್ಲಿಸಬೇಕು ಎಂದರು. ದೇಶವನ್ನು ರಕ್ಷಿಸುವ ಸೈನಿಕರು, ದೇಶದ ಹಸಿವನ್ನು ನೀಗಿಸುವ ರೈತರು, ದೇಶವನ್ನ ಸ್ವಚ್ಛ ಮಾಡುವ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರು, ದೇಶಸಂರಕ್ಷಣೆಯ ಭವ್ಯಭಾರತದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಹಾಗಾಗಿ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರ ಶ್ರಮ ಸಾರ್ಥಕ ಸೇವೆ ಅಪಾರವಾದುದು ಎಂದರು.
ಪೌರ ಕಾರ್ಮಿಕರಿಗೆ ಆಯುರ್ವೇದ ಕμÁಯ, ಆರ್ಗಾನಿಕ್ ಬಾಳೆಹಣ್ಣು, ಬನ್ ವಿತರಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನೊಂದಿಗೆ ಆಚರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್, ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಸಂಚಲಕರಾದ ಅಪೂರ್ವ ಸುರೇಶ್, ಸಹ ಸಂಚಾಲಕ ಪರಮೇಶ್ ಗೌಡ, ಮಾಜಿ ನಗರ ಪಾಲಿಕಾ ಸದಸ್ಯ ಜಯರಾಂ, ಕಾರ್ಯಾಲಯ ಕಾರ್ಯದರ್ಶಿ ಚೇತನ್, ಸಂದೀಪ್ ಹಾಗೂ ಇನ್ನಿತರರು ಹಾಜರಿದ್ದರು.

