ಮೈಸೂರು: ಪಿಎಂ ಕೇರ್ಸ್ ವೆಂಟಿಲೇಟರ್ ಗಳನ್ನು ಮೈಸೂರಲ್ಲಿ ಬಳಸುತ್ತಿಲ್ಲ ಸಂಬ ಸಂಸದ ಪ್ರತಾಪ್ ಸಿಂಹ ಅವರ ಆರೋಪಕ್ಕೆ ಶಾಸಕ ಎಸ್. ಎ. ರಾಮ್ ದಾಸ್ ಪ್ರತಿಕ್ರಿಯಿಸಿ ಜಿಲ್ಲಾಡಳಿತದ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರ ಆರೋಪಕ್ಕೆ ಟ್ವೀಟ್ ಮಾಡುವ ಮೂಲಕ ರಾಮದಾಸ್ ಉತ್ತರಿಸಿದ್ದಾರೆ.
ಪಿಎಂ ಕೇರ್ಸ್ ಲೆಕ್ಕ ಕೇಳಿದವರಿಗೆ ಎಂದು ಟ್ವೀಟ್ ಆರಂಭಿಸಿರುವ ರಾಮ್ ದಾಸ್, ಮೈಸೂರಿನಲ್ಲಿ ನೂತನವಾದ ತುಳಸಿದಾಸಪ್ಪ ಆಸ್ಪತ್ರೆಯ ಕಟ್ಟಡದಲ್ಲಿ 50 ಹಾಸಿಗೆಗಳ ಕೋವಿಡ್ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿರುವ ಪಿಎಂ ಕೇರ್ಸ್ ನಿಂದ ನೀಡಿದ ವೆಂಟಿಲೇಟರ್ ಗಳು ಎಂದು ಬರೆದ್ದಾರೆ.
ಪಿಎಂ ಕೇರ್ಸ್ ವೆಂಟಿಲೇಟರ್ ಬಳಸುತ್ತಿಲ್ಲ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ ರಾಮದಾಸ್ ಉತ್ತರ

