ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ -ಡಿ ಟಿ ಪ್ರಕಾಶ್

ಮೈಸೂರು: ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಮಾನವ ಧರ್ಮ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ತಿಳಿಸಿದರು.
ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಅರ್ಚಕರ ಪುರೋಹಿತರ ಕುಟುಂಬ ವರ್ಗಕ್ಕೆ ಅಪೂರ್ವ ಸ್ನೇಹ ಬಳಗ ಮತ್ತು ಸುಮುಖ ಕನ್ಸಟ್ರಕ್ಷನ್ ವತಿಯಿಂದ ನಗರದ ಚಾಮುಂಡಿಪುರಂ ಅಪೂರ್ವ ಹೊಟೆಲ್ ಸಭಾಂಗಣದಲ್ಲಿ ಆಹಾರ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಉಳ್ಳವರು ಮನಸು ಕೂರೂನಾ ಸಂಕಷ್ಟ ಕಾಲದಲ್ಲಿ ಸಹಕಾರ ನೀಡುವಂತೆ ಮನವಿ ಅವರು ಮನವಿ ಮಾಡಿದರು.
ದೇಶ ರಾಜ್ಯದಲ್ಲಿ ಕೊರೂನಾ ರುದ್ರ ತಾಂಡವ ಮುಂದುವರಿದಿದ್ದು, ನಗರ ಮತ್ತು ಜಿಲ್ಲೆ ಜನ ತೀರಾ ಸಂಕಷ್ಟಕ್ಕೊಳಗಾಗಿದ್ದು ನಾಡಿನ ಜನ ಕೊರೂನಾ ಹಿಮ್ಮೆಟ್ಟಿಸಲು ಪಕ್ಷಭೇದ ಮರೆತು ಒಟ್ಟಾಗಿ ಹೋರಾಡುವಂತೆ ಡಿ ಟಿ ಪ್ರಕಾಶ್ ಕರೆ ನೀಡಿದರು.
ಈ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ಸುಮುಖ ಕನ್ ಸ್ಟ್ರಕ್ಷನ್ ಮಾಲೀಕ ಅರುಣ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ, ನವೀನ್, ಚೇತನ್ ಕಾಂತರಾಜು ಹಾಗೂ ಇನ್ನಿತರರು ಹಾಜರಿದ್ದರು.