ಮೈಸೂರು: ಲಾಕ್ ಡೌನ್ ನೀತಿ-ನಿಯಮವನ್ನು ಸಾರ್ವಜನಿಕರು ಪಾಲಿಸುವುದು ಅವಶ್ಯಕವಾಗಿದೆ ಎಂದು ಶಾಸಕ ಎಲ್. ನಾಗೇಂದ್ರ ಹೇಳಿದರು.
ಚಾಮರಾಜ ಕ್ಷೇತ್ರದ 25ನೇ ವಾರ್ಡ್ ತಿಲಕನಗರದಲ್ಲಿ ಮಿಷನ್ ಆಸ್ಪತ್ರೆ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ 600ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಫಾರುಕಿಯ ಕಾಲೇಜು ಬಳಿ ಶಾಸಕ ಎಲ್. ನಾಗೇಂದ್ರ ರವರು ಗುರುವಾರ ಚಾಲನೆ ನೀಡಿ, ಮಾತನಾಡಿದರು.
ನಾಗರೀಕರು ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ಮುಂದಾದರೆ ಮಾತ್ರ ಕೋವಿಡ್ ಸೋಂಕು ಮೈಸೂರಿನಲ್ಲಿ ಕಡಿಮೆಯಾಗಲಿದೆ ಎಂದರು.
ಕೊವಿಡ್ ಸಂದರ್ಭದಲ್ಲಿ ಬಡಜನರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ನಂತರ ಸಮಾಜಸೇವಕರಾದ ದಿಲೀಪ್ ರವರು ಮಾತನಾಡಿ, ರಾಜ್ಯಸರ್ಕಾರ ಈಗಾಗಲೇ ಆಟೋ, ಕಾರ್ ಚಾಲಕರಿಗೆ ಮತ್ತು ಕಲಾವಿದರಿಗೆ, ಕಾರ್ಮಿಕರಿಗೆ, ಆರ್ಥಿಕ ಸಂಕಷ್ಟ ಪ್ಯಾಕೇಜ್ ಬಿಡುಗಡೆ ಮಾಡಿದ್ದು ಸೇವಾಸಿಂಧೂ ಪೆÇೀರ್ಟಲ್ ನಲ್ಲಿ ನೊಂದಣಿಯಾಗಿ ಆರ್ಥಿಕ ಸಹಾಯ ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ, ನಗರಪಾಲಿಕೆ ಸದಸ್ಯ ಆರ್. ರಂಗಸ್ವಾಮಿ, ಚಾಮರಾಜ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚ್ಚಿನ್, ಅಜಯ್ ಶಾಸ್ತ್ರಿ, ಚೇತನ್, ಸ್ವಾಮಿ, ರಾಘವೇಂದ್ರ, ಜಯಪ್ರಕಾಶ್ ಹಾಗೂ ಇನ್ನಿತರರು ಇದ್ದರು.

