ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರ ಸ್ಥಾನಕ್ಕೆ ಶಿಲ್ಪಾನಾಗ್ ರಾಜೀನಾಮೆ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಿಸಿರುವ ಶಿಲ್ಪಾನಾಗ್ ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು ಎಂದಿದ್ದರಲ್ಲದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಯವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ .ಜಿಲ್ಲಾಧಿಕಾರಿಗಳ ವರ್ತನೆಯಿಂದ ಬೇಸತ್ತ ಮೈಸೂರು ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ.ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಶಿಲ್ಪಾನಾಗ್ ಐಎಎಸ್ ಅಧಿಕಾರಿಗೆ ಮತ್ತೊಬ್ಬ ಐಎಎಸ್ ಅಧಿಕಾರಿಯಿಂದ ಕಿರುಕುಳ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂದ ಸಿಎಸ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.ಕೋವಿಡ್ ಸಮಯದಲ್ಲಿ ಎಷ್ಟೆ ಕಷ್ಟ ಪಟ್ಟು ಕೆಲಸ ನಿವರ್ವಹಿಸುತ್ತಿದ್ದರೂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳದಿಂದ ಕೆಲಸ ಮಾಡಲು ಆಸಕ್ತಿಯೇ ಇಲ್ಲದಂತಾಗಿದೆ. ಇಂತಹ ಡಿಸಿ ಯಾರಿಗೂ ಸಿಗುವುದು ಬೇಡ ಎಂದು ತಿಳಿಸಿದರು. ಸುದ್ದಿಗೋಷ್ಟಿ ಸಂಧರ್ಭದಲ್ಲೆ ಭಾವೋದ್ವೇಗಕ್ಕೆ ಒಳಗಾದ ಶಿಲ್ಪಾನಾಗ್ ಅವರು, ರಾಜಿನಾಮೆ ನೀಡುವ ಬಗ್ಗೆ ನಿಧಾರ ಕೈಗೊಂಡಿರುವುದಾಗಿ ಹೇಳಿದರು.ಯಾವುದೇ ಜಿಲ್ಲೆಗೆ ಇಂತಹ ಜಿಲ್ಲಾಧಿಕಾರಿ ಬರಬಾರದು .ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡೋಕೆ ಆಗ್ತಿಲ್ಲ.ಜಿಲ್ಲಾಧಿಕಾರಿಗಳಿಗೆ ನನ್ನ ಬಗ್ಗೆ ವೈಯಕ್ತಿಕ ದ್ವೇಷ ಇದ್ದರೇ ನನಗೆ ದ್ವೇಷ ಮಾಡಲಿ.ಅದನ್ನ ಬಿಟ್ಟು ಪಾಲಿಕೆಯ ಅಧಿಕಾರಿಗಳು,ಸಿಬ್ಬಂದಿಗಳ ಮೇಲೆ ಅಧಿಕಾರ ಚಲಾಯಿಸ್ತೀದ್ದಾರೆ.ಕೋವಿಡ್ 19 ಮಿತ್ರ ನಾ ನನ್ನದು ಅಂತ ಪ್ರಧಾನಿ ಅವರ ಬಳಿ ಹೆಸರು ತೆಗೆದುಕೊಂಡಿದ್ದಾರೆ.ಆ ಜಾತಿ ಈ ಜಾತಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನನ್ನ ಮನಸ್ಸಿಗೆ ತುಂಬ ನೋವಾಗಿದೆ ನಾನು ನನ್ನ ಕೆಲಸಕ್ಕೆ ರಿಸೈನ್ ಮಾಡ್ತೀದ್ದೀನಿ ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಕಣ್ಣೀರು ಹಾಕಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಇಂತಹ ದುರಂಕಾರದ ಜಿಲ್ಲಾಧಿಕಾರಿ ನೋಡಿಲ್ಲ.ಮೈಸೂರು ಜಿಲ್ಲೆ ಉಳಿದುಕೊಳ್ಳಲಿ ಆದಷ್ಟು ಬೇಗ ತೊಲಗಿ.ನೀವು ಹೋಗಲ್ಲ ನಾನೇ ಹೋಗ್ತೀನಿ. ಇಂತಹ ಕೆಳಮಟ್ಟದ ಮನಸ್ಥಿತಿ ಇರುವವರ ಜೊತೆ ಕೆಲಸ ಮಾಡಲು ಇಷ್ಟವಾಗುತ್ತಿಲ್ಲ. ನಾನು ಪಾಲಿಕೆಗೆ ಒಂದಕ್ಕೆ ಅಲ್ಲ. ನನ್ನ ಐ ಎ ಎಸ್ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ತಿಳಿಸಿದರು.

