ಕನ್ನಡ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಡಿ.ಟಿ.ಪ್ರಕಾಶ್

ಮೈಸೂರು: ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಎಂದು ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್ ತಿಳಿಸಿದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್ ರವರು ಮಾತನಾಡಿದರು.
ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದು ಕೇವಲ ಸಾಹಿತ್ಯ ಕೃಷಿಯಿಂದಲ್ಲ. ಕನ್ನಡದ ಮನಸ್ಸುಗಳನ್ನು, ಲೇಖಕರನ್ನು, ಕವಿಗಳನ್ನು ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿ, ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಅಂದೇ ಶ್ರಮಿಸಿ ನಿಜವಾದ ಅರ್ಥದಲ್ಲಿ ಕನ್ನಡದ ಆಸ್ತಿಯಾದರೂ ಮಾಸ್ತಿ ಎಂದು ತಿಳಿಸಿದರು.
ಮಾಸ್ತಿಯವರು ಸರ್ಕಾರದ ಕಾನೂನು ಕಟ್ಟಳೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತಗಬೇಕು ಎಂದು ಪ್ರತಿಪಾದಿಸಿ ಹಲವು ಇಂಗ್ಲಿμï ಹಾಗೂ ಫ್ರಾನ್ಸ್ ಭಾμÉಯ ನುಡಿಗಳನ್ನು ಕಂದಾಯ ಇಲಾಖೆಯಲ್ಲಿದ್ದಾಗ ಕನ್ನಡಕ್ಕೆ ಭಾμÁಂತರ ಮಾಡಿಸಿ ಅನುμÁ್ಠನಕ್ಕೆ ತಂದರು ಎಂದು ಹೇಳಿದರು.
ಮೈಸೂರು ಬ್ರಾಹ್ಮಣ ಸಂಘ ಹಾಗೂ ಡಿಟಿ.ಎಸ್ ಫೌಂಡೇಶನ್ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಜನ್ಮದಿನೋತ್ಸವದ ಅಂಗವಾಗಿ ಹಿನಕಲ್ ಮತ್ತು ಹೂಟಗಳ್ಳಿ ಕೆಹೆಚ್.ಬಿ ಕಾಲೋನಿಯಲ್ಲಿ ಕೊರೊನಾ ಸೋಂಕಿನಿಂದ ತೊಂದರೆಯಲ್ಲಿರುವ 100 ಅವಶ್ಯಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ನ್ನು ವಿತರಿಸಲಾಯಿತು.
ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲರಾವ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಎಂ.ಆರ್ ಬಾಲಕೃಷ್ಣ, ಸಂಜೆಸಮಯ ದಿನಪತ್ರಿಕೆ ಸಂಪಾದಕ ಅನಿಲ್ ಕುಮಾರ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಸುಚೀಂದ್ರ, ಚಕ್ರಪಾಣಿ, ಜ್ಯೋತಿ ಇನ್ನಿತರರು ಇದ್ದರು.