ಯಡಿಯೂರಪ್ಪ ಹೇಳಿಕೆ ಸ್ವಾಗತಿಸುವೆ -ಹೆಚ್. ವಿಶ್ವನಾಥ್

ಮೈಸೂರು: ಹೈ ಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪನವರು ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಹೆಚ್. ವಿಶ್ವನಾಥ್ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹೈ ಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ ಎಂದು ಸಿಎಂ ಹೇಳಿರುವ ವಿಚಾರ ಸಂಬಂಧ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿ, ಸಿಎಂ ಯಡಿಯೂರಪ್ಪನವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದಿರುವ ಅವರು, ನನಗೆ ಪರ್ಯಾಯ ನಾಯಕ ಇದ್ದಾರೆ ಎಂದು ಹೇಳಿರುವುದು ದೊಡ್ಡ ಮಾತು ಎಂದರು.
ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎನ್ನುವುದು ಸ್ವಾಗತ ಮಾಡುವೆ ಎಂದರು.
ಯಾರೋ ಮಾತನಾಡಿದರು ಎಂದು ಯಡಿಯೂರಪ್ಪನವರು ರಾಜೀನಾಮೆ ಕೊಡುತ್ತಿಲ್ಲ ಎಂದು ವಿಶ್ವನಾಥ್ ಹೇಳಿದರು.