ನವದೆಹಲಿ: ಕೇಂದ್ರವು ಜೂ. 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಸೋಮವಾರ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ಈ ಘೋಷಣೆ ಮಾಡಿದರು.
ಲಸಿಕೆ ಉತ್ಪಾದಕರಿಂದ ಭಾರತ ಸರ್ಕಾರವೇ ಒಟ್ಟು ಲಸಿಕೆ ಉತ್ಪಾದನೆಯ ಶೇ. 75ರಷ್ಟನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡುತ್ತದೆ ಎಂದು ಮೋದಿ ಹೇಳಿದರು.
ಇಂದಿನಿಂದ, ರಾಜ್ಯಗಳೊಂದಿಗೆ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದ 25% ಕೆಲಸದ ಜವಾಬ್ದಾರಿಯನ್ನು ಭಾರತ ಸರ್ಕಾರವು ಸಹ ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಲಾಗಿದೆ. ಮುಂಬರುವ 2 ವಾರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.
ಜೂ. 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ -ಮೋದಿ

