ಮೈಸೂರು: ವೃತ್ತಿ ದೃಢೀಕರಣ ಪತ್ರವನ್ನ ಪಾಲಿಕೆ ಅಧಿಕಾರಿಗಳೇ ಜನರಬಳಿಗೆ ಬಂದು ವಿತರಿಸಲಿ ಎಂದು ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಮನವಿ ಮಾಡಿದ್ದಾರೆ.
ಕೋವಿಡ್ 2ರ ಅಲೆಯಲ್ಲಿ ರಾಜ್ಯ ಸರ್ಕಾರ ಕೌಶಲಶ್ರಮಿಕ ವರ್ಗಕ್ಕೆ ತಲಾ 2000 ರೂ.ಗಳ ಪರಿಹಾರ ಧನವನ್ನು ಅವರ ಖಾತೆಗೆ ನೀಡಲು ತೀರ್ಮಾನಿಸಿದ್ದು, ಕ್ಷೌರಿಕರು, ಅಗಸರು, ಗೃಹಕಾರ್ಮಿಕರು, ಅಲೆಮಾರಿಗಳು, ಟೈಲರ್ ಗಳು, ಹಮಾಲರು, ಮೆಕ್ಯಾನಿಕ್, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಅಡಿಯಲ್ಲಿ 11 ವರ್ಗದವರು ಸವಲತ್ತಿಗೆ ಅರ್ಜಿ ಸಲ್ಲಿಸಲು, ಉದ್ಯೋಗ ದೃಢಿಕರಣ ಪತ್ರ ಅವಶ್ಯಕವಿದ್ದು ಅಧಿಕಾರಿಗಳಿಂದ ಸಹಿ ಪಡೆಯಲು ನಾಗರೀಕರು ಸಮಯ ವ್ಯರ್ಥಮಾಡಿಕೊಂಡು ಇಂದಿನ ಲಾಕ್ ಡೌನ್ ಸಂಧರ್ಭದಲ್ಲಿ ಸೋಂಕಿನಿಂದ ದೂರವಿರಬೇಕೆ ವಿನಹ ಅಲೆಯುವಂತಾಗಬಾರದು ಎಂದವರು ತಿಳಿಸಿದ್ದಾರೆ.
ಹಾಗಾಗಿ ಅಧಿಕಾರಿಗಳೇ ಸ್ವತಃ ತೆರಿಗೆ ಕಟ್ಟಿರುವ ಅಂಗಡಿ ಮಳಿಗೆ ಉದ್ಯೋಗಸ್ಥರ ಬಳಿ ತೆರಳಿ ಅರ್ಜಿ ವಿತರಿಸಿ ಸಹಿ ಮಾಡಿ ದೃಢಿಕರಿಸಲು ಅಭಿಯಾನ ಕೈಗೊಳ್ಳಲು ನಗರಪಾಲಿಕೆ ಅಧಕಾರಿಗಳು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜೋನ್ ಕಚೇರಿ ವಲಯ ಮಟ್ಟದಲ್ಲಿ ಇದಕ್ಕೊಂದು ಸಮಿತಿ ರಚಿಸಿ ತೆರೆಗೆ ನಿರೀಕ್ಷಕರು ಮತ್ತು ನಿಯೋಜಿಸಿರುವ ಸಂಬಂಧಪಟ್ಟ ಅಧಿಕಾರಿಗಳು ದೃಢೀಕರಿಸಿ ಸಮಸ್ಯೆ ನಿವಾರಿಸುವಲ್ಲಿ ಕಾರ್ಯನಿರ್ವಹಿಸಬೇಕು. ಆಯಾ ವಾರ್ಡಿಗೆ ಸಂಬಂಧಪಟ್ಟ ಅಧಿಕಾರಿಗಳ ಹೆಸರು, ದೂರವಾಣಿ ಸಂಪರ್ಕ ಸಂಖ್ಯೆಯನ್ನು ಪಾಲಿಕೆ ಪ್ರಕಟಣೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಅಜಯ್ ಶಾಸ್ತ್ರಿ ಮನವಿ ಮಾಡಿದ್ದಾರೆ.
ವೃತ್ತಿ ದೃಢೀಕರಣ ಪತ್ರವನ್ನು ಪಾಲಿಕೆ ಅಧಿಕಾರಿಗಳೇ ಜನರ ಬಳಿ ಬಂದು ವಿತರಿಸಲಿ

